ADVERTISEMENT

ಭಾರತದಲ್ಲಿನ ಜೇಮ್ಸಬಾಂಡ್ ಚಿತ್ರಿಕರಣ ರದ್ದು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 10:55 IST
Last Updated 26 ಸೆಪ್ಟೆಂಬರ್ 2011, 10:55 IST

ನವದೆಹಲಿ(ಐಎಎನ್‌ಎಸ್): ಖ್ಯಾತ ಬ್ರಿಟಿಷ್ ಮೂಲದ ಜೇಮ್ಸ್ ಬಾಂಡ್ ಚಿತ್ರವೊಂದರ ಕೆಲವು ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಭಾರತೀಯ ರೈಲ್ವೆ ಮಂಡಳಿ ಹಸಿರು ನಿಶಾನೆ ನೀಡಿದ್ದರೂ, ಈಗ ಭಾರತದಲ್ಲಿನ ಆ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ಕೈ ಬಿಡಲಾಗಿದೆ.

ಇದಕ್ಕೂ ಮುಂಚೆ ಈ ಸಂಬಂಧ ಚಿತ್ರದ ಭಾರತದಲ್ಲಿನ ಚಿತ್ರೀಕರಣದ ಹೊಣೆ ಹೊತ್ತಿದ್ದ ಇಂಡಿಯಾ ಟೇಕ್ ಒನ್ ಪ್ರೊಡಕ್ಷನ್ದ್ ಸಂಸ್ಥೆಯ ಕೋರಿಕೆಯಂತೆ ಬಾಂಡ್ ಚಿತ್ರದ ಚಿತ್ರೀಕರಣ ನಡೆಸಲು ರೈಲ್ವೆ ಸಚಿವಾಲಯ ಹಸಿರು ನಿಶಾನೆ ನೀಡಿತ್ತು.

ರೈಲು ಬೋಗಿಗಳ ಮೇಲೆ ಮತ್ತು ಗೋವೆಯ ದೂದ್ ಸಾಗರ ಜಲಪಾತದ ಬಳಿಯ ಸುರಂಗ ಮಾರ್ಗದಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದ್ದರೂ, ಸುರಕ್ಷತೆಯ ಮತ್ತು ಭದ್ರತೆಯ ಕಾರಣಗಳಿಂದ ಇನ್ನೂ ಅನುಮತಿ ಲಭಿಸಿರಲಿಲ್ಲ. ಹೀಗಾಗಿ ಭಾರತದಲ್ಲಿ  ಚಿತ್ರೀಕರಣ ನಡೆಸುವುದನ್ನು ಕೈಬಿಟ್ಟು, ಇಲ್ಲಿ ಚಿತ್ರೀಕರಿಸಲುದ್ದೇಶಿಸಿದ್ದ ದೃಶ್ಯಗಳ ಚಿತ್ರೀಕರಣವನ್ನು ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ ಎಂದು ಇಂಡಿಯಾ ಟೇಕ್ ಒನ್ ಪ್ರೊಡಕ್ಷನ್ದ್ ಸಂಸ್ಥೆಯು ರೈಲ್ವೆ ಸಚಿವಾಲಯಕ್ಕೆ ತಿಳಿಸಿದೆ.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.