ADVERTISEMENT

ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಮ್ ಸಾರಾಭಾಯಿ ಜನುಮದಿನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2017, 13:55 IST
Last Updated 12 ಆಗಸ್ಟ್ 2017, 13:55 IST
ವಿಕ್ರಮ್ ಸಾರಾಭಾಯಿ
ವಿಕ್ರಮ್ ಸಾರಾಭಾಯಿ   

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜಗತ್ತಿನ ಹಲವು ರಾಷ್ಟ್ರಗಳ ಉಪಗ್ರಹವನ್ನು ಇಸ್ರೊ ಕಕ್ಷೆಗೆ ಸೇರಿಸುತ್ತಿದೆ. ಅಮೆರಿಕದ ನಾಸಾ ಭಾರತೀಯ ಸಂಸ್ಥೆಯ ಸಹಯೋಗ ಬಯಸುತ್ತಿದೆ. ಈ ಸಾಧನೆಗಳಿಗೆ ಮೂಲ ವಿಜ್ಞಾನಿ ವಿಕ್ರಮ್‌ ಸಾರಾಭಾಯಿ. ಇಂದು(ಆ.12) ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ಎಂದೇ ಕರೆಯಲ್ಪಡುವ ವಿಕ್ರಮ್ ಸಾರಾಭಾಯಿ ಅವರ 98ನೇ ಜನುಮದಿನ.

ಸಾರಾಭಾಯಿ ಅವರು ಸ್ವಂತ ಹಣ ಖರ್ಚು ಮಾಡಿ ತಿರುವನಂತಪುರದ ಬಳಿ ವಿವಿಧ ಕ್ಷೇತ್ರಗಳ ತಜ್ಞರನ್ನು ಸೇರಿಸಿಕೊಂಡು ಬಾಹ್ಯಾಕಾಶ ಕುರಿತು ಸ್ವತಂತ್ರವಾಗಿ ಸಂಶೋಧನಾ ಸಂಸ್ಥೆ ಆರಂಭಿಸಿದರು. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಂದಿನ ಪ್ರಯತ್ನವೇ ಇಂದಿನ ಬೆಳವಣಿಗೆಗೆ ಮೈಲಿಗಲ್ಲಾಗಿದೆ. 

ವಿಕ್ರಮ್ ಸಾರಾಭಾಯಿ

ADVERTISEMENT

ಜನನ:1919ರ ಆಗಸ್ಟ್‌ 12
ತಂದೆ:ಅಂಬಾಲಾ ಸಾರಾಭಾಯಿ
ತಾಯಿ: ಸರಳಾ ದೇವಿ
ವಿದ್ಯಾಭ್ಯಾಸ : ಅಹಮದಾಬಾದ್‌ನ ಗುಜರಾತ್‌ ಕಾಲೇಜು, ಸೆಂಟ್ ಜಾನ್ಸ್ ಕಾಲೇಜ್ , ಕೆಂಬ್ರಿಡ್ಜ್‌  ವಿಶ್ವವಿದ್ಯಾಲಯ, ಬೆಂಗಳೂರು ಐಐಎಸ್‌ಸಿಯಲ್ಲಿ ಸರ್‌ ಸಿ ವಿ ರಾಮನ್ ಅವರ ಮಾರ್ಗದರ್ಶನದಲ್ಲಿ ಕಾಸ್ಮಿಕ್ ಕಿರಣಗಳ ಕುರಿತು ಸಂಶೋಧನೆ. 1947 ರಲ್ಲಿ ಕೆಂಬ್ರಿಜ್  ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ.

ಮರಣ:1971ರ ಡಿಸೆಂಬರ್ 30


ಸಾಧನೆ: ದೇಶದಲ್ಲಿ ಹತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಹಾಗೂ ಅನೇಕ ಬಾಹ್ಯಾಕಾಶ ಕಾರ್ಯಕ್ರಮಗಳ ಮೂಲಕ ಬಹಳಷ್ಟು ಯುವ ವಿಜ್ಞಾನಿಗಳನ್ನು ಮುನ್ನೆಲೆಗೆ ತಂದಿರುವ ಕೀರ್ತಿ ಇವರದು. 

*ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್, ತಿರುವನಂತಪುರ

*ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಹಮದಾಬಾದ್

* ಇಸ್ರೊ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ 

* ಐಐಎಮ್ ಅಹಮದಾಬಾದ್ ಸ್ಥಾಪನೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.