ನವದೆಹಲಿ (ಪಿಟಿಐ): 1960ರಲ್ಲಿ ಲಂಡನ್‌ನಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಭಾರತದ ಪ್ರಖ್ಯಾತ ಚಿತ್ರಕಲಾವಿದ ಮಂಜಿತ್ ಬಾವಾ ರಚಿಸಿದ್ದ ತೈಲ ವರ್ಣಚಿತ್ರಗಳ ಸಂಗ್ರಹ ‘ಲೈಫ್’ ಲಂಡನ್‌ನಲ್ಲಿ ಏಪ್ರಿಲ್ 8ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಅಂದಾಜು 20ರಿಂದ 30 ಲಕ್ಷ ಮೊತ್ತಕ್ಕೆ ಮಾರಾಟವಾಗಲಿದೆ.
ಲಂಡನ್‌ನ ಬೋನ್‌ಹಮ್ಸ್‌ನಲ್ಲಿ ಏಪ್ರಿಲ್ 8ರಂದು ತೈಲವರ್ಣ ಚಿತ್ರಗಳ ಮಂಡಳಿ ಈ ಹರಾಜು ಪ್ರಕ್ರಿಯೆಯನ್ನು ಸಂಘಟಿಸಿದ್ದು, ಆಧುನಿಕ ಹಾಗೂ ಸಮಕಾಲೀನ ದಕ್ಷಿಣ ಏಷ್ಯಾದ ಕಲಾವಿದರ ಚಿತ್ರಗಳು ಹಾಗೂ ಬಾವಾ ಅವರು ಬಿಡಿಸಿದ ಪ್ರಸಿದ್ಧ ಚಿತ್ರಗಳ ಸಂಗ್ರಹ ಹರಾಜು ಆಗಲಿದೆ.
ಪ್ರಥಮ ಬಾರಿಗೆ ಲಂಡನ್‌ಗೆ ಬಾವಾ ಬಂದಾಗ ಅವರಿಗೆ ಉಳಿದುಕೊಳ್ಳಲು ಎಲ್ಲಿಯೂ ಜಾಗ ಸಿಗಲಿಲ್ಲ. ಆಕಸ್ಮಿಕವಾಗಿ ಆತ ಹೆಸರಿನ ಕೊನೆಯಲ್ಲಿ ಬಾವಾ ಎಂದು ಹೊಂದಿರುವ ಹೊಂದಿದ ವ್ಯಕ್ತಿಯನ್ನು ಭೇಟಿಯಾದ. ಈ ಹೊಸ ಸ್ನೇಹಿತನೊಂದಿಗೆ ಲಂಡನ್‌ನಲ್ಲಿ ಉಳಿದುಕೊಂಡ ಬಾವಾ ವಾಪಾಸ್ ಭಾರತಕ್ಕೆ ತೆರಳುವಾಗ ತನ್ನ ಗೆಳೆಯನಿಗೆ ತಾನು ಬಿಡಿಸಿದ ಚಿತ್ರಗಳ ಸಂಗ್ರಹ ‘ಲೈಫ್’ ಅನ್ನು ನೀಡಿದರು. ಈ ಅದ್ಭುತ ಚಿತ್ರಗಳ ಸಂಗ್ರಹವೇ ಲಂಡನ್ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಲಿದೆ.
ಇನ್ನು ಹರಾಜು ಪ್ರಕ್ರಿಯೆಯಲ್ಲಿ ಖ್ಯಾತ ಕಲಾವಿದ ಎಂ.ಎಫ್.ಹುಸೇನ್ ಅವರ ಕಲಾಕೃತಿಗಳು ಸೇರಿದೆ. ಅವರು 1978ರಲ್ಲಿ ರಚಿಸಿದ ಕ್ಯಾನ್ವಾಸ್ ಚಿತ್ರಕಲೆಯ ‘ಅನ್‌ಟೈಟಲ್ಡ್ ಹಾರ್ಸಸ್’ ಚಿತ್ರ 1.7 ಕೋಟಿಯಿಂದ 2.5 ಕೋಟಿಗೆ ಮಾರಾಟವಾಗಲಿದೆ ಎಂದು ಸಂಘಟಕರು ಅಂದಾಜಿಸಿದ್ದಾರೆ.
ಇನ್ನು ಹೆಮೆನ್ ಮಜುಂದಾರ್ ರಚಿಸಿದ ‘ಸ್ಮೃತಿ’ ಚಿತ್ರಕಲೆ 20 ಲಕ್ಷದಿಂದ 30 ಲಕ್ಷದವರೆಗೆ ಹರಾಜಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಮೂಲದ ಖ್ಯಾತ ಕಲಾವಿದ ಸೈಯದ್ ಹೈದರ್ ರಝಾ ಚಿತ್ರಗಳು ಸಹಾ 20 ಲಕ್ಷದಿಂದ 25 ಲಕ್ಷದವರೆಗೆ ಮಾರಾಟವಾಗಲಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.