ADVERTISEMENT

ಭಾರತ ಅಕ್ರಮ ಪ್ರವೇಶ: 17 ಪಾಕ್‌ ಪ್ರಜೆಗಳ ಸೆರೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2014, 19:30 IST
Last Updated 19 ಏಪ್ರಿಲ್ 2014, 19:30 IST

ಮಹಾರಾಜ್‌ಗಂಜ್‌(ಪಿಟಿಐ): ಅಕ್ರಮವಾಗಿ ಗಡಿ ಪ್ರವೇಶಿಸಿದ ಪಾಕಿಸ್ತಾನದ 17 ಮಂದಿಯನ್ನು ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಸಿಬ್ಬಂದಿ ಭಾರತದ ಗಡಿಭಾಗ ವಾದ ಸೊನೌಲಿ ಎಂಬಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಮಹಿಳೆಯರು ಮತ್ತು ಹತ್ತು ಮಕ್ಕಳು  ಸೇರಿದ್ದಾರೆ.

‘ಪಾಕ್‌ ಆಕ್ರಮಿತ ಕಾಶ್ಮೀರದ  ಮುಜಫ್ಫರಾಬಾದ್‌ ಪಟ್ಟಣಕ್ಕೆ ಸೇರಿರುವ ಇವರು, ನೇಪಾಳದ ಕಠ್ಮಂಡು ತಲುಪಿ ಅಲ್ಲಿಂದ ಭಾರತ ಗಡಿ ಸೊನೌಲಿ ಪ್ರವೇಶಿಸುತ್ತಿದ್ದಾಗ ಬಂಧಿಸಲಾಯಿತು’ ಎಂದು ಎಸ್‌ಎಸ್‌ಬಿ ಉಪ ಕಮಾಂಡೆಂಟ್‌ ಮಿಥಲ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.