ADVERTISEMENT

ಭಾರಿ ಗುಂಡಿನ ಚಕಮಕಿ:ಆರು ನಕ್ಸಲರ ಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಲತೆಹಾರ್, ಜಾರ್ಖಂಡ್ (ಪಿಟಿಐ): ಲತೆಹಾರ್ ಜಿಲ್ಲೆಯ ಕರ್ಮದಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ಮಧ್ಯೆ ಗುರುವಾರ ನಡೆದ ಭಾರಿ ಗುಂಡಿನ ಚಕಮಕಿಯಲ್ಲಿ ಆರು ಮಂದಿ ನಕ್ಸಲರು ಸತ್ತಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಬೆಳಿಗ್ಗೆ ಸುಮಾರು 11.30ಕ್ಕೆ ಆರಂಭವಾದ ಗುಂಡಿನ ಚಕಮಕಿಯಲ್ಲಿ ಕೋಬ್ರಾ ಮತ್ತು ಜಾಗ್ವಾರ್ ಪಡೆಯ ಇಬ್ಬರು ಯೋಧರಿಗೆ ತೀವ್ರ ಗಾಯಗಳಾಗಿವೆ ಎಂದು ಲತೆಹಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಾಂತಿ ಕುಮಾರ್ ತಿಳಿಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿರುವುದು ನಿಜ. ಆರು  ಮಂದಿ ನಕ್ಸಲರು ಸತ್ತಿದ್ದಾರೆ ಎಂಬ ಪ್ರಾಥಮಿಕ ವರದಿ ಇದೆ. ಆದರೆ ಮೃತದೇಹಗಳು ದೊರಕುವವರೆಗೂ ಖಚಿತವಾಗಿ ಏನನ್ನೂ ಹೇಳಲಾಗದು ಎಂದು ಐಜಿಪಿ (ಕಾರ್ಯಾಚರಣೆ) ಆರ್. ಕೆ. ಮಲಿಕ್ ತಿಳಿಸಿದ್ದಾರೆ.

ನಕ್ಸಲರ ವಿರುದ್ಧ ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳು ದಟ್ಟಾರಣ್ಯವನ್ನು ಪ್ರವೇಶಿಸಿದ್ದು, ನಕ್ಸಲರು ಮುಖಾಮುಖಿಯಾಗಿರುವುದರಿಂದ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.