ADVERTISEMENT

ಭಿನ್ನಾಭಿಪ್ರಾಯ ತಾರಕಕ್ಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ನವದೆಹಲಿ (ಪಿಟಿಐ): ಜನ ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯ ಸದಸ್ಯರ ಮಧ್ಯೆಯ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಪ್ರತಿನಿಧಿಗಳು ಅಪ್ರಸ್ತುತ ವಿಚಾರಗಳನ್ನು ಮಸೂದೆಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಕಪಿಲ್ ಸಿಬಲ್ ಆಪಾದಿಸಿದ್ದಾರೆ.

ಸರ್ಕಾರದ ಒಟ್ಟಾರೆ ನಡವಳಿಕೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಸ್ಥೆ ಸ್ಥಾಪಿಸುವುದನ್ನು ತಪ್ಪಿಸುವ ಪ್ರಯತ್ನವಾಗಿದೆ ಎಂದು ಆಪಾದಿಸಿ ನಾಗರಿಕ ಪ್ರತಿನಿಧಿಗಳು ಸಮಿತಿಯ ಸಭೆಗೆ ಬಹಿಷ್ಕಾರ ಹಾಕಿ ದೂರ ಉಳಿದರು.

ಎಲ್ಲಾ ಸದಸ್ಯರು ಹಾಜರಾಗಲಿ ಬಿಡಲಿ ಮುಂಗಾರು ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಬೇಕಾಗಿರುವುದರಿಂದ ನಾವು ಜೂನ್ 30ರ ಒಳಗೆ ಕರಡು ಸಿದ್ಧಪಡಿಸುತ್ತೇವೆ ಎಂದು ಸಿಬಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.