ನವದೆಹಲಿ (ಐಎಎನ್ಎಸ್): ಭಾನುವಾರ ಸಂಜೆ ಸಂಭವಿಸಿದ ಭಾರಿ ಭೂಕಂಪದಿಂದಾಗಿ ಸಿಕ್ಕಿಂನಲ್ಲಿ ಸೇನಾ ಬಂಕರ್ಗಳಿಗೆ ಹಾನಿಯಾಗಿದ್ದು, ಹಲವು ಸೈನಿಕರು ಗಾಯಗೊಂಡಿದ್ದಾರೆ.
ಪೂರ್ವ ಸಿಕ್ಕಿಂನಲ್ಲಿನ ಭಾರತ-ಚೀನಾ ಗಡಿಯಲ್ಲಿ ನಿಯೋಜಿಸಲ್ಪಟ್ಟಿದ್ದ, ಸೇನಾ ಬಂಕರ್ಗಳು ಭೂಕಂಪಕ್ಕೆ ಸಿಕ್ಕು ಹಾನಿಗೀಡಾಗಿವೆ. ಇದರಲ್ಲಿದ್ದ ಹಲವಾರ ಸೈನಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ತಂಡ ಹೆಲಿಕಾಪ್ಟರ್ಗಳ ಮೂಲಕ ಗಾಯಗೊಂಡ ಸೈನಿಕರನ್ನು ರಕ್ಷಿಸಲು ತೊಡಗಿದ್ದಾರೆ. ಈ ಪ್ರದೇಶದಲ್ಲಿ ಸರಿಸುಮಾರು 2 ನಿಮಿಷಗಳ ಕಾಲ ಭೂಮಿ ನಡುಗಿತ್ತೆಂದು ತಿಳಿದುಬಂದಿದೆ.
ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.