ADVERTISEMENT

ಮಕ್ಕಳ ‘ಆಧಾರ್’ ರದ್ದತಿಗೆ ಅವಕಾಶವಿಲ್ಲ: ಪ್ರಾಧಿಕಾರ

ಪಿಟಿಐ
Published 3 ಏಪ್ರಿಲ್ 2018, 19:24 IST
Last Updated 3 ಏಪ್ರಿಲ್ 2018, 19:24 IST
ಮಕ್ಕಳ ‘ಆಧಾರ್’ ರದ್ದತಿಗೆ ಅವಕಾಶವಿಲ್ಲ: ಪ್ರಾಧಿಕಾರ
ಮಕ್ಕಳ ‘ಆಧಾರ್’ ರದ್ದತಿಗೆ ಅವಕಾಶವಿಲ್ಲ: ಪ್ರಾಧಿಕಾರ   

ನವದೆಹಲಿ: ಹದಿನೆಂಟು ವರ್ಷಕ್ಕಿಂತ ಮೊದಲು ಆಧಾರ್‌ ನೋಂದಣಿ ಮಾಡಿಕೊಂಡಿರುವ ಮಕ್ಕಳು 18 ವರ್ಷ ತುಂಬಿದ ಬಳಿಕ ಈ ನೋಂದಣಿಯನ್ನು ರದ್ದುಪಡಿಸಲು ಅವಕಾಶ ಇಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆಧಾರ್ ವಿರುದ್ಧದ ವಿವಿಧ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಯುಐಡಿಎಐ ಈ ಮಾಹಿತಿ ನೀಡಿದೆ.

ತಮಗೆ ಅರಿವಿಲ್ಲದೆಯೇ ಆಧಾರ್‌ಗೆ ನೋಂದಣಿಯಾಗಿರುವ (ಪೋಷಕರು ನೋಂದಣಿ ಮಾಡಿಸಿರುವ) ಮಕ್ಕಳು, ಮುಂದೆ ವಯಸ್ಕರಾದಾಗ ಆಧಾರ್‌ನಿಂದ ಹೊರಬರಲು ಸಾಧ್ಯವಿಲ್ಲ. ಆಧಾರ್ ನೋಂದಣಿಯನ್ನು ರದ್ದುಪಡಿಸಲು ಆಧಾರ್ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಯುಐಡಿಎಐ ಪರ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಪೀಠಕ್ಕೆ ಮಾಹಿತಿ ನೀಡಿದರು.

ADVERTISEMENT

‘ಆಧಾರ್‌ ಹೊಂದಿರುವವರು ತಮ್ಮ ಬಯೊಮೆಟ್ರಿಕ್ ವಿವರಗಳು ಯಾರಿಗೂ ಸಿಗದಂತೆ ‘ಲಾಕ್’ ಮಾಡುವ ವ್ಯವಸ್ಥೆ ಇದೆ. ಅವರಿಗೆ ಅಗತ್ಯವಿದ್ದಾಗ ಮಾತ್ರ ಅವನ್ನು ‘ಅನ್‌ಲಾಕ್’ ಮಾಡಿಕೊಳ್ಳಬಹುದು. ಬೆರಳಚ್ಚು ದೃಢೀಕರಣ ವೈಫಲ್ಯದ ಪ್ರಮಾಣ ಶೇ 6ರಷ್ಟು ಮಾತ್ರ, ದೃಢೀಕರಣಗಳು ವಿಫಲವಾಗಿದೆ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಗೆ ಸಹಾಯಧನ, ಮತ್ತಿತರ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.