ADVERTISEMENT

ಮಡೆಸ್ನಾನಕ್ಕೆ ತಡೆ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:04 IST
Last Updated 15 ಡಿಸೆಂಬರ್ 2012, 9:04 IST

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಾದಿತ ಮಡೆಸ್ನಾನ ಪದ್ಧತಿಗೆ ನಿಷೇಧ ಹೇರಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಶುಕ್ರವಾರ ಸುಪ್ರೀಂಕೋರ್ಟ್ ತಡೆ ನೀಡಿದೆ.

ಹೈಕೋರ್ಟ್ ಆದೇಶ ಪ್ರಶ್ನಿಸಿ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಜೈನ್ ಹಾಗೂ ಮದನ್ ಬಿ.ಲೋಕೂರ್ ಅವರಿದ್ದ ಪೀಠ, ನಿಷೇಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸಿತು.

ಮಡೆಸ್ನಾನ ಪದ್ಧತಿಯನ್ನು `ಎಡೆಸ್ನಾನ'ವಾಗಿ ಬದಲಿಸಲಾಗುತ್ತದೆ. ಆದ್ದರಿಂದ ಭಕ್ತರು ಇನ್ನು ಮುಂದೆ ಎಂಜಲು ಎಲೆಯ ಮೇಲೆ ಉರುಳುವಂತಿಲ್ಲ. ಅದರ ಬದಲಿಗೆ ದೇವರ ನೈವೇದ್ಯಕ್ಕೆ ಇಟ್ಟ ಎಡೆಯ ಮೇಲೆ ಉರುಳಿ ಹರಕೆ ತೀರಿಸಬಹುದು' ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಇದರ ಆಧಾರದ ಮೇಲೆ ಹೈಕೋರ್ಟ್ ಮಡೆಸ್ನಾನ ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.