ನವದೆಹಲಿ (ಐಎಎನ್‌ಎಸ್): ಇಪ್ಪತ್ತರ ಹರೆಯದ ಮಣಿಪುರ ಮೂಲದ ಯುವತಿ ಹಾಗೂ ಆಕೆಯ ಸೋದರ ಸಂಬಂಧಿಯನ್ನು ನಿಂದಿಸಿ ಅವರ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ತಮ್ಮ ವಿರುದ್ಧ ಮಾಡಲಾದ ಜನಾಂಗೀಯ ನಿಂದನೆಯನ್ನು ಮಣಿಪುರದ ಸೋದರ ಸಂಬಂಧಿಗಳು ಪ್ರತಿಭಟಿಸಿದಾಗ ಇಬ್ಬರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಉತ್ತರಭಾಗದ ಕ್ಯಾಂಪಸ್ ಬಳಿಯಲ್ಲಿರುವ ವಿಜಯ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಪುರದ ಉಖ್ರುಲ್ ಜಿಲ್ಲೆಯರಾದ 24 ವರ್ಷದ ಯುವತಿ ದೆಹಲಿ ವಿ.ವಿಯಲ್ಲಿ ಬಿಇಡಿ ಓದುತ್ತಿದ್ದರು. ಆಕೆಯ ಸೋದರ ಸಂಬಂಧಿ ಪದವಿ ಶಿಕ್ಷಣ ಪಡೆಯುತ್ತಿದ್ದ. ಶುಕ್ರವಾರ ರಾತ್ರಿ ಭೋಜನ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.