ನವದೆಹಲಿ (ಪಿಟಿಐ) ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸೋಮವಾರ ಮಂಡಿಸಿದ 2014-15ನೇ ಸಾಲಿನ ಮಧ್ಯಂತರ ಬಜೆಟ್‌ನ ಮುಖ್ಯಾಂಶಗಳು ಇಂತಿವೆ.
* ವಿದೇಶಿ ವಿನಿಮಯ ಮೀಸಲು 1500 ಕೋಟಿ ಡಾಲರ್ ಏರಿಕೆ
* ವಿತ್ತೀಯ ಕೊರತೆ ಶೇಕಡಾ 4.6 ರಷ್ಟು ನಿರೀಕ್ಷೆ
* ಆಹಾರಧಾನ್ಯಗಳ ಉತ್ಪಾದನೆ 26 ಕೋಟಿ 30 ಲಕ್ಷ ಟನ್ ನಿರೀಕ್ಷೆ
* ಇಂಧನ ಸಬ್ಸಿಡಿಗೆ 65 ಸಾವಿರ ಕೋಟಿ.
* ರೈಲ್ವೆ ಇಲಾಖೆಗೆ 29 ಸಾವಿರ ಕೋಟಿ
* ಪಂಚಾಯತ್ ರಾಜ್ ಇಲಾಖೆಗೆ 75000 ಸಾವಿರ ಕೋಟಿ.
* ಅಬಕಾರಿ ಸುಂಕ ಶೇಕಡಾ 12 ರಿಂದ 10ಕ್ಕೆ ಇಳಿಕೆ
* ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ.
* ಚೆನ್ನೈ–ಬೆಂಗಳೂರು, ಬೆಂಗಳೂರು–ಮುಂಬೈ, ಅಮೃತಸರ–ಕೊಲ್ಕತ್ತಾದಲ್ಲಿ ಕೈಗಾರಿಕಾ ಕಾರಿಡಾರ್
* ಮುಂದಿನ 10 ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ 234, 600 ಮೆಗಾವ್ಯಾಟ್ ಏರಿಕೆ
* ರೆವಿನ್ಯೂ ಕೊರತೆ ಶೇಕಡಾ 3ರಷ್ಟು ನಿರೀಕ್ಷೆ
* ವಿದ್ಯಾರ್ಥಿಗಳ ಸಾಲದ ಮೇಲಿನ ಬಡ್ಡಿ ದರ ಇಳಿಕೆ.
* ಅಕ್ಕಿ ದಾಸ್ತಾನು ಮಳಿಗೆ ಮೇಲಿನ ಸೇವಾ ತೆರಿಗೆ ವಿನಾಯಿತಿ
* ಬ್ಲಡ್ ಬ್ಯಾಂಕ್‌ಗಳಿಗೆ (ರಕ್ತನಿಧಿ) ಸೇವಾ ತೆರಿಗೆ ಇಲ್ಲ.
* 2014–15ರಲ್ಲಿ ಯೋಜನೆ ವೆಚ್ಚ 5 ಲಕ್ಷ 55, 322 ಕೋಟಿ; ಯೋಜನೇತರ ವೆಚ್ಚ 12 ಲಕ್ಷ 7, 892 ಕೋಟಿ.
* ಸಣ್ಣ ಕಾರುಗಳು, ಮೋಟಾರು ಸೈಕಲ್ ಮತ್ತು ಕ್ರೀಡಾ ವಾಹನಗಳ ಮೇಲಿನ ತೆರಿಗೆ ಶೇಕಡಾ 8ರಷ್ಟು ಇಳಿಕೆ.
* ಇಂಧನ ಸಬ್ಸಿಡಿಗೆ 65 ಸಾವಿರ ಕೋಟಿ
* ಉತ್ಪಾದನಾ ವಲಯಕ್ಕೆ ರಫ್ತು ಮೇಲಿನ ತೆರಿಗೆ ಮನ್ನಾ
* ರಕ್ಷಣಾ ವೆಚ್ಚ ಶೇಕಡಾ 10ರಷ್ಟು ಹೆಚ್ಚಳ; 2 ಲಕ್ಷ 24 ಸಾವಿರ ಕೋಟಿಯಷ್ಟು
* ಒಂದು ಶ್ರೇಣಿ, ಒಂದು ಪಿಂಚಣಿ ವ್ಯವಸ್ಥೆಗೆ 500 ಕೋಟಿ ಮೀಸಲು
* 500 ಮೆಗಾವ್ಯಾಟ್ ಸಾಮರ್ಥ್ಯದ 4 ಸೌರ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣ
* ಸಮುದಾಯ ರೇಡಿಯೊ ಉತ್ತೇಜನಕ್ಕೆ 10 ಕೋಟಿ
* 19 ತೈಲ ನಿಕ್ಷೇಪಗಳ ಹಂಚಿಕೆ
* ನಿರ್ಮಾಣ ಹಂತದಲ್ಲಿ ಏಳು ನೂತನ ವಿಮಾನ ನಿಲ್ದಾಣಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.