ADVERTISEMENT

ಮಧ್ಯಪ್ರದೇಶ ಗಣಿ ಮಾಫಿಯಾ: ಪೊಲೀಸರತ್ತ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 12:35 IST
Last Updated 10 ಮಾರ್ಚ್ 2012, 12:35 IST

ಪನ್ನಾ (ಪಿಟಿಐ): ಗಣಿ ಮಾಫಿಯಾಕ್ಕೆ ಬಲಿಯಾದ ಐಪಿಎಸ್ ಅಧಿಕಾರಿಯ ಹತ್ಯೆ ನಡೆದ ಒಂದು ವಾರದ ಒಳಗೆ ಮತ್ತೊಂದು ಅಂಥದ್ದೇ ಘಟನೆ ಮಧ್ಯಪ್ರದೇಶದ ಅಜಯ್ ಘರ್ ಬಳಿ ನಡೆದ ವರದಿಯಾಗಿದೆ.

ಅಕ್ರಮ ಮರಳು ಗಣಿಗಾರಿಕೆ ಜಾಡು ಹಿಡಿದು ಅಜಯ್ ಘರ್ ಬಳಿಯ ಪ್ರದೇಶಕ್ಕೆ ತೆರಳಿದ ಪೊಲೀಸ್ ಅಧಿಕಾರಿ ಜೆ.ಎಸ್.ಮಾರ್ಕಮ್ ನೇತೃತ್ವದ ತಂಡದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಕುರಿತು ವರದಿಯಾಗಿಲ್ಲ. ಘಟನೆ ನಡೆದ ಪ್ರದೇಶಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂಧಿಯನ್ನು ಕಳುಹಿಸಲಾಗಿದೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ವ್ಯಾಪ್ತಿಯಲ್ಲಿ ಮಾ. 8ರಂದು ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಅವರನ್ನು ದುಷ್ಕರ್ಮಿಗಳು ಟ್ರಾಕ್ಟರ್ ಹತ್ತಿಸಿ ಸಾಯಿಸಿದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.