ADVERTISEMENT

ಮಧ್ಯವರ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

ನವದೆಹಲಿ : ಆಗಸ್ಟಾ ವೆಸ್ಟ್‌ಲ್ಯಾಂಡ್ ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿಯಲ್ಲಿ ನಡೆದ ₹ 3,600 ಕೋಟಿ ಅಕ್ರಮದ ಮಧ್ಯವರ್ತಿ ಎನ್ನಲಾದ ಯುರೋಪ್‌ನ ಕಾರ್ಲೋಸ್ ಗೆರೋಸಾನನ್ನು ಇಟಲಿಯಲ್ಲಿ ಬಂಧಿಸಲಾಗಿದೆ.

ಈತನ ಬಂಧನಕ್ಕೆ ಜಾರಿ ನಿರ್ದೇಶನಾಲಯವು (ಇ.ಡಿ) ಕಳೆದ ವರ್ಷ ಇಂಟರ್‌ಪೋಲ್ ನೋಟಿಸ್ ಜಾರಿ ಮಾಡಿತ್ತು. ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸುವ ನಿಟ್ಟಿನಲ್ಲಿ ಶೀಘ್ರ ರಾಜತಾಂತ್ರಿಕ ಕ್ರಮಗಳನ್ನು ಆರಂಭಿಸಲಾಗುವುದು ಎಂದು ಇ.ಡಿ ಹೇಳಿದೆ.

ಅತ್ಯಾಚಾರ

ADVERTISEMENT

ಕೋಲ್ಕತ್ತ (ಪಿಟಿಐ): ನಗರದಲ್ಲಿ ದುರ್ಗಾ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಾಲಕಿಯೊಬ್ಬಳಿಗೆ ಬಲವಂತವಾಗಿ ಮದ್ಯ ಕುಡಿಸಿ, ನಂತರ ಕೊಠಡಿಗೆ ಕರೆದೊಯ್ದು ಮೂವರು
ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇವರಲ್ಲಿ ಒಬ್ಬ ಆಕೆಯ ಪ್ರೇಮಿ ಎಂದು ಹೇಳಲಾಗಿದೆ.

ಕಲಬೆರಕೆ ಆಹಾರ ಸಚಿವರ ಪತ್ರ

ನವದೆಹಲಿ (ಪಿಟಿಐ): ಹಬ್ಬಗಳ ಸಮಯದಲ್ಲಿ ಕಲಬರಕೆ ಆಹಾರ ಉತ್ಪನ್ನ ಹಾಗೂ ಕಳಪೆ ಗುಣಮಟ್ಟದ ಆಭರಣಗಳ ಮಾರಾಟ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.  ಕಲಬೆರಕೆ ಆಹಾರ ಆರೋಗ್ಯಕ್ಕ ಹಾನಿಕಾರಕ. ಈ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.