ನವದೆಹಲಿ (ಪಿಟಿಐ): ರೈಲುಗಳು ಮತ್ತು ರೈಲು ನಿಲ್ದಾಣಗಳ್ಲ್ಲಲಿ ಅಪರಾಧ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವುದರ ನಡುವೆಯೂ, ಮಹಿಳಾ ಪ್ರಯಾಣಿಕರ ವಿರುದ್ಧ ಅನುಚಿತ ವರ್ತನೆ ಪ್ರಕರಣಗಳು ಹೆಚ್ಚುತ್ತಿರುವುದು ಇದೀಗ ಅಧಿಕಾರಿಗಳ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಅತ್ಯಾಚಾರ, ಕೊಲೆ, ಕಳ್ಳತನ, ಚುಡಾಯಿಸುವುದು ಸೇರಿದಂತೆ ಕಳೆದ ವರ್ಷ ಮಹಿಳೆಯರ ವಿರುದ್ಧ 712 ಪ್ರಕರಣಗಳು ನಡೆದಿವೆ. 2010ರಲ್ಲಿ ಇಂಥ 501 ಪ್ರಕರಣಗಳು ನಡೆದಿದ್ದವು ಎಂದು ರೈಲ್ವೆ ಇಲಾಖೆ ಅಂಕಿ ಅಂಶ ತಿಳಿಸಿದೆ.
ರೈಲ್ವೆ ಭದ್ರತಾ ಪಡೆ ಮತ್ತು ಜಿಆರ್‌ಪಿಯ ಸುಮಾರು 3500ರಷ್ಟು ಸಿಬ್ಬಂದಿಯನ್ನು ನೇಮಿಸಲಾಗಿದ್ದರೂ ಕಳೆದ ವರ್ಷದಲ್ಲೇ 15 ಅತ್ಯಾಚಾರ ಪ್ರಕರಣಗಳು, 362 ಚುಡಾಯಿಸಿದ ಪ್ರಕರಣಗಳು ದಾಖಲಾಗಿವೆ.
ಪ್ರಮುಖ ರೈಲುಗಳಲ್ಲಿ ಸಿಬ್ಬಂದಿಯನ್ನು ನೇಮಿಸುವ ಮೂಲಕ ಭದ್ರತೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.