ADVERTISEMENT

ಮಹಿಳೆಯರಿಗೆ ಕಡಿಮೆ ಅನಾರೋಗ್ಯ,ಹೆಚ್ಚು ರಜೆ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅನಾರೋ­ಗ್ಯ­ಕ್ಕೀಡಾಗುವುದು ಕಡಿಮೆ. ಆದರೆ, ಮಹಿಳೆಯರು ಅನಾರೋಗ್ಯದ ನೆಪ ಒಡ್ಡಿ ಹೆಚ್ಚು ಕಚೇರಿಯಲ್ಲಿ ರಜೆ ಪಡೆಯು ತ್ತಾರೆ ಎಂದು ಗ್ಲೋಬಲ್‌ ಡೆವಲಪ್‌ ಮೆಂಟ್‌ ನೆಟ್‌­ವರ್ಕ್‌ ಸಂಸ್ಥೆ ಅಧ್ಯ ಯನ  ಹೇಳಿದೆ.

ಭಾರತೀ­ಯರ ಆರೋಗ್ಯ ರಕ್ಷಣೆ ಕುರಿತು ಅಧ್ಯಯನ ನಡೆಸಿರುವ ಸಂಸ್ಥೆ ಈ  ವಿಷ­ಯ­ ಬಹಿರಂಗಪಡಿಸಿದೆ. ಕಡಿಮೆ ಪ್ರಮಾಣದಲ್ಲಿ ಅನಾರೋಗ್ಯ­ಕ್ಕೀಡಾ­ದರೂ ಹೆಚ್ಚು ರಜೆ ತೆಗೆದು ಕೊಳ್ಳುವ ಮಹಿಳೆಯರು ತಮ್ಮ ಕೆಲಸದ ದಿನಗಳ­ನ್ನು ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನ ಹೇಳಿದೆ.

ಮಹಿಳೆಯರು ಅನಾರೋಗ್ಯದ ನೆಪ ಒಡ್ಡಿ ವರ್ಷದಲ್ಲಿ ಶೇ 15ರಷ್ಟು ಪ್ರಮಾ ಣದಲ್ಲಿ ರಜೆ ಪಡೆದರೆ, ಪುರುಷರು ಶೇ 6ರಷ್ಟು ಮಾತ್ರ ರಜೆ ಪಡೆಯುತ್ತಾರಂತೆ. ಮಹಿಳೆಯರು ಹೆಚ್ಚು ರಜೆ ಪಡೆಯುವು ದರಿಂದ ಆದಾಯ ಮೇಲೆ ಭಾರಿ ಪರಿ ಣಾಮ ಬೀರುತ್ತದೆ. ಈ ವಿಷಯ ದಲ್ಲಿ ಪುರುಷರಿಗೆ ಹೆಚ್ಚು ನಷ್ಟವಿಲ್ಲ.

ಆದರೆ, ಕೆಲವೊಮ್ಮೆ ಮಹಿಳೆ ಮತ್ತು ಪುರುಷ ಇಬ್ಬರ ಅನಾರೋಗ್ಯ, ಚಿಕಿತ್ಸೆ ವಿಷಯ ಗಳಲ್ಲಿ ಸಾಮ್ಯತೆ ಕಂಡುಬಂದಿದೆ. ಪುರು ಷರಿಗೆ ಹೋಲಿಸಿದರೆ ಮಹಿಳೆ ಯರು ಆರೋಗ್ಯಕ್ಕಾಗಿ ಹೆಚ್ಚು ವೆಚ್ಚ ಮಾಡು ತ್ತಾರೆ  ಎಂದು ಅಧ್ಯಯನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT