ADVERTISEMENT

ಮಾಜಿ ಸಿ.ಜೆ ಸಂಬಂಧಿಗಳ ಬಳಿ ಕಪ್ಪುಹಣ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 17:25 IST
Last Updated 26 ಫೆಬ್ರುವರಿ 2011, 17:25 IST

ಕೊಚ್ಚಿ (ಪಿಟಿಐ): ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ಮೂವರು ನಿಕಟ ಸಂಬಂಧಿಗಳ ಬಳಿ ಕಪ್ಪುಹಣ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

‘ತೆರಿಗೆ ವಂಚನೆ ಪ್ರಕರಣಗಳ ತನಿಖೆ ನಡೆಸಿದಾಗ ಬಾಲಕೃಷ್ಣನ್ ಅವರ ಇಬ್ಬರು ಅಳಿಯಂದಿರಾದ ಪಿ.ವಿ. ಶ್ರೀನಿಜನ್, ಎಂ.ಜೆ.ಬೆನ್ನಿ (ಇಬ್ಬರೂ  ವಕೀಲರು) ಮತ್ತು ಸಹೋದರ ಕೆ.ಜಿ.ಭಾಸ್ಕರನ್ ಅವರು ಕಪ್ಪುಹಣ ಹೊಂದಿರುವುದು ಬೆಳಕಿಗೆ ಬಂದಿತು’ ಎಂದು ಕೊಚ್ಚಿಯ ಆದಾಯ ತೆರಿಗೆ ಮಹಾ ನಿರ್ದೇಶಕ (ತನಿಖೆ) ಇ.ಟಿ. ಲುಕೋಸ್ ವರದಿಗಾರರಿಗೆ ತಿಳಿಸಿದರು.

ಈ ಮೂವರ ಬಳಿ ಕಪ್ಪುಹಣ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿರುವ ಅವರು, ಹಣದ ಮೊತ್ತ ಎಷ್ಟೆಂಬುದನ್ನು ತಿಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.