ADVERTISEMENT

ಮಾಯಾವತಿ ಆಡಳಿತ ಹೊಗಳಿದ ಬಿಜೆಪಿ ಸಚಿವ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಮಾಯಾವತಿ ಆಡಳಿತ ಹೊಗಳಿದ ಬಿಜೆಪಿ ಸಚಿವ
ಮಾಯಾವತಿ ಆಡಳಿತ ಹೊಗಳಿದ ಬಿಜೆಪಿ ಸಚಿವ   

ಲಖನೌ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಕಾರ್ಯವೈಖರಿಯನ್ನು ಉತ್ತರ ಪ್ರದೇಶದ ಸಚಿವರೊಬ್ಬರು ಪ್ರಶಂಸೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಗೂ ಮುಜುಗರ ತಂದಿದೆ.

‘ಮಾಯಾವತಿ ಅವರು ಕಟ್ಟುನಿಟ್ಟಿನ ಆಡಳಿತ ನಡೆಸಿದ್ದರು. ಅವರ ನಿರ್ದೇಶನಗಳನ್ನು ಕಡೆಗಣಿಸುವ ಧೈರ್ಯವನ್ನು ಅಧಿಕಾರಿಗಳು ಎಂದಿಗೂ ತೋರಲಿಲ್ಲ’ ಎಂದು ಹಿರಿಯ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಖಾಸಗಿ ಟಿವಿ ವಾಹಿನಿಗೆ ಮಂಗಳವಾರ ನೀಡಿದ್ದ ಸಂದರ್ಶನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಮಾಯಾವತಿ ಅವರ ಆಡಳಿತ ಸಮಾಜವಾದಿ ಪಕ್ಷಕ್ಕಿಂತ ಉತ್ತಮವಾಗಿತ್ತು. ಅವರು ನೀಡುವ ಸಲಹೆ ಸೂಚನೆಗಳನ್ನು ಅಧಿಕಾರಿಗಳು ಚಾಚೂತಪ್ಪದೇ ಪಾಲಿಸುತ್ತಿದ್ದರು. ಆದರೆ, ಈಗ ಸಚಿವರ ಆದೇಶಗಳನ್ನು ಅಧಿಕಾರಿಗಳು ಪಾಲಿಸುವುದಿಲ್ಲ’ ಎಂದು ಹೇಳಿದ್ದರು.

ADVERTISEMENT

ಸಚಿವ ಮೌರ್ಯ ಅವರ ಹೇಳಿಕೆಯಿಂದ ತೀವ್ರ ಅಸಮಾಧಾನಗೊಂಡ ರಾಜ್ಯದ ಬಿಜೆಪಿ ನಾಯಕರು ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದರು.

ಬಳಿಕ ತಮ್ಮ ನಿಲುವು ಬದಲಿಸಿಕೊಂಡು ಸ್ಪಷ್ಟನೆ ನೀಡಿರುವ ಮೌರ್ಯ, ‘ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ’ ಎಂದು ಹೇಳಿದ್ದಾರೆ. ಮೌರ್ಯ ಅವರ ಅಳಿಯ ಇತ್ತೀಚೆಗೆ ಸಮಾಜವಾದಿ ಪಕ್ಷ ಸೇರಿದ್ದರು. ಇದಕ್ಕೆ ಮೌರ್ಯ ಅವರೇ ಸಹಮತ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.