ಮುಂಬೈ (ಪಿಟಿಐ): ಮಾಲೇಗಾಂವ್‌ನಲ್ಲಿ 2006ರಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ 9 ಆರೋಪಿಗಳಿಗೆ ಮೊಕಾ ನ್ಯಾಯಾಲಯವು ಶನಿವಾರ ಜಾಮೀನು ನೀಡಿದೆ.
ಆರೋಪಿಗಳ ಜಾಮೀನು ಅರ್ಜಿಯನ್ನು ವಿರೋಧಿಸುವುದಿಲ್ಲ ಎಂದು ರಾಷ್ಟ್ರೀಯ ತನಿಖಾ ತಂಡವು (ಎನ್‌ಐಎ) ಹೇಳಿದ ಹಿನ್ನೆಲೆಯಲ್ಲಿ ನ್ಯಾಯಾಧೀಶ ವೈ.ಡಿ.ಶಿಂಧೆ ತಲಾ 50 ಸಾವಿರ ಮುಚ್ಚಳಿಕೆಯೊಂದಿಗೆ ಆರೋಪಿಗಳಿಗೆ ಜಾಮೀನು ನೀಡಿದರು. ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆಯೂ ಸೂಚನೆ ನೀಡಿದರು.
ಸಲ್ಮಾನ್ ಫಾರ್ಸಿ, ಶಬೀರ್ ಅಹ್ಮದ್, ನೂರುಲ್‌ಹುದಾ ದೋಹಾ, ರಿಯಾಸ್ ಅಹ್ಮದ್, ಮೊಹಮ್ಮದ್ ಅಲಿ, ಆಸಿಫ್ ಖಾನ್, ಜಾವೇದ್ ಶೇಖ್, ಫಾರೂಖ್ ಅನ್ಸಾರಿ ಮತ್ತು ಅಬ್ರಾರ್ ಅಹ್ಮದ್‌ಗೆ ಜಾಮೀನು ದೊರೆತಿದೆ. ಮುಂಬೈ ಸರಣಿ ಸ್ಫೋಟ ಪ್ರಕರಣದ ಆರೋಪ ಹೊತ್ತಿರುವ ಕಾರಣ ಆಸಿಫ್ ಖಾನ್ ಹಾಗೂ ಮೊಹಮ್ಮದ್ ಅಲಿಯನ್ನು ಕೋರ್ಟ್ ಬಿಡುಗಡೆ ಮಾಡಿಲ್ಲ. ಉಳಿದ ಆರೋಪಿಗಳು ಇದೇ ತಿಂಗಳ 8 ರಂದು ಬಿಡುಗಡೆಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.