ADVERTISEMENT

ಮಾವೋವಾದಿಗಳ ದಾಳಿ: 9 ಮಂದಿ ಸಿಆರ್‌ಪಿಎಫ್‌ ಯೋಧರ ಸಾವು

ಏಜೆನ್ಸೀಸ್
Published 13 ಮಾರ್ಚ್ 2018, 11:36 IST
Last Updated 13 ಮಾರ್ಚ್ 2018, 11:36 IST
ಎಎನ್‌ಐ/ಟ್ವಿಟರ್‌ ಚಿತ್ರ
ಎಎನ್‌ಐ/ಟ್ವಿಟರ್‌ ಚಿತ್ರ   

ರಾಯ್‌ಪುರ: ಮಾವೋವಾದಿಗಳು ಚತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಸುಧಾರಿತ ಸ್ಫೋಟಕ ಸಾಧನವನ್ನು ಸ್ಫೋಟಿಸಿದ ಕಾರಣ ಸಿಆರ್‌ಪಿಎಫ್‌ನ 9 ಯೋಧರು ಮೃತಪಟ್ಟಿದ್ದಾರೆ.

ಸಿಆರ್‌ಪಿಎಫ್‌ನ 212ನೇ ಬೆಟಾಲಿಯನ್‌ ತಂಡ ಕಿಸ್ತರಾಮ್‌ – ಪಾಲೋದಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಮಾವೋವಾದಿಗಳು ಈ ಕೃತ್ಯವೆಸಗಿದ್ದಾರೆ. ಇದು ಗುಂಡಿನ ಚಕಮಕಿಗೆ ಕಾರಣವಾಯಿತು ಎಂದು ನಕ್ಸಲ್‌ ವಿರೋಧಿ ಕಾರ್ಯಾಚರಣೆಯ ವಿಶೇಷ ಡಿಜಿಪಿ ಡಿಎಂ ಅವಸ್ತಿ ತಿಳಿಸಿದ್ದಾರೆ.

ಸ್ಫೋಟದಿಂದಾಗಿ ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

‘ಹೆಚ್ಚುವರಿ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು ಸದ್ಯ ಗುಂಡಿನ ಚಕಮಕಿ ನಿಂತಿದೆ’ ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಗೃಹಸಚಿವ ರಾಜ್‌ನಾಥ್‌ ಸಿಂಗ್‌ ಅವರು ಟ್ವಿಟರ್‌ ಮೂಲಕ ಘಟನೆಯನ್ನು ಖಂಡಿಸಿದ್ದು, ‘ಗಾಯಗೊಂಡಿರುವ ಯೋಧರು ಶೀಘ್ರ ಗುಣಮುಖರಾಗುವುಂತೆ ಪ್ರಾರ್ಥಿಸುತ್ತೇನೆ. ಸಿಆರ್‌ಪಿಎಫ್‌ನ ಮಹಾ ನಿರ್ದೇಶಕರೊಂದಿಗೆ ಮಾತನಾಡಿದ್ದು, ಘಟನಾ ಸ್ಥಳಕ್ಕೆ ತೆರಳುವಂತೆ ತಿಳಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.