ADVERTISEMENT

ಮಿತ್ರ ಪಕ್ಷಗಳನ್ನು ದಡ ಮುಟ್ಟಿಸದ ಮೋದಿ ಅಲೆ!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ನವದೆಹಲಿ: ಶಿವಸೇನಾ ಮೈತ್ರಿ ಕಡಿದು ಕೊಂಡ ಬಳಿಕ ಬಿಜೆಪಿ ಮಹಾ­ರಾಷ್ಟ್ರ­ದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎನ್ನುವುದು ನಿಜ. ಆದರೆ ‘ಮೋದಿ ಅಲೆ’ಯು ಸಣ್ಣಪುಟ್ಟ ಮಿತ್ರ ಪಕ್ಷಗಳನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾಗಿದೆ.
ಬಿಜೆಪಿ ತನ್ನ ಮಿತ್ರ ಪಕ್ಷಗಳಾದ  ಆರ್‌ಪಿಐ (ಅಠಾವಳೆ), ಸ್ವಾಭಿಮಾನ್‌ ಶೇತ್ಕಾರ್‌ ಸಂಘಟನ್‌, ರಾಷ್ಟ್ರೀಯ ಸಮಾಜ ಪಕ್ಷ ಹಾಗೂ ಶಿವ ಸಂಗ್ರಾಮ ಪಕ್ಷಕ್ಕೆ  30 ಸ್ಥಾನ ಬಿಟ್ಟುಕೊಟ್ಟಿತ್ತು.

ಪುಣೆಯ ದೌಂಡ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿ ರಾಹುಲ್ ಸುಭಾಸ್‌ ರಾವ್ ಕುಲ್‌ ಮಾತ್ರ ಆಯ್ಕೆ­ಯಾಗಿ­ದ್ದಾರೆ. ಎನ್‌ಸಿಪಿ ಟಿಕೆಟ್‌ ನಿರಾಕರಿಸಿ­ದ್ದರಿಂದ ಕೊನೆ ಗಳಿಗೆ­ಯಲ್ಲಿ ರಾಹುಲ್ ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

‌ಆರ್‌ಪಿಐಗೆ ದಲಿತರು, ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಗೋಪಾ­ಲಕ ಸಮುದಾಯ (ಗೌಳಿ) ಹಾಗೂ  ಸ್ವಾಭಿಮಾನ್‌ ಶೇತ್ಕಾರ್‌ ಸಂಘಟನೆಗೆ  ರೈತರ ಬೆಂಬಲವಿದ್ದು, ಈ ಸಮುದಾ­ಯಗಳ ಬೆಂಬಲ ಪಡೆಯಲು ಬಿಜೆಪಿ ಈ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಜತೆ ಕೈಜೋಡಿಸುವ ತಂತ್ರ ರೂಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.