ADVERTISEMENT

ಮಿಲಿಟರಿ ಸೇವಾ ವೇತನ ಪ್ರಸ್ತಾವ ತಿರಸ್ಕಾರ

ಪಿಟಿಐ
Published 4 ಡಿಸೆಂಬರ್ 2018, 18:06 IST
Last Updated 4 ಡಿಸೆಂಬರ್ 2018, 18:06 IST

ನವದೆಹಲಿ: ಅತಿ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸುವ ಯೋಧರಿಗೆ ’ಮಿಲಿಟರಿ ಸೇವಾ ವೇತನ’ (ಎಂಎಸ್‌ಪಿ) ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

87,646 ಜ್ಯೂನಿಯರ್‌ ಕಮಿಷನ್ಡ್‌ ಅಧಿಕಾರಿಗಳು ಸೇರಿದಂತೆ ಒಂದು ಲಕ್ಷ ಯೋಧರಿಗೆ ಎಂಎಸ್‌ಪಿ ನೀಡುವ ಪ್ರಸ್ತಾವ ಸಲ್ಲಿಸಲಾಗಿತ್ತು. ಹಣಕಾಸು ಸಚಿವಾಲಯ ಬಹುದಿನಗಳ ಬೇಡಿಕೆಯನ್ನು ತಿರಸ್ಕರಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದ್ದು, ಮತ್ತೊಮ್ಮೆ ಮನವಿ ಸಲ್ಲಿಸುವುದಾಗಿ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಂಎಸ್‌ಪಿಯನ್ನು ಪ್ರತಿ ತಿಂಗಳು ₹5,500ರಿಂದ 10 ಸಾವಿರಕ್ಕೆ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಇದರಿಂದ, ಪ್ರತಿ ವರ್ಷ ₹610 ಕೋಟಿಯಾಗುತ್ತಿತ್ತು.

ADVERTISEMENT

ವಿಶಿಷ್ಟ ಮತ್ತು ಕಠಿಣವಾದ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಯೋಧರಿಗೆ ಎಂಎಸ್‌ಪಿಯನ್ನು ಜಾರಿಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.