ADVERTISEMENT

ಮುಂಗಾರು ಪ್ರವೇಶ; ಮಹಾಮಳೆಗೆ ಮುಂಬೈ ಜಲಾವೃತ

ಇನ್ನೂ 5 ದಿನ ಭಾರಿ ಮಳೆ ಸಾಧ್ಯತೆ

ಪಿಟಿಐ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಮುಂಬೈನ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲಿ ಕಾರು ಹಾದು ಹೋಗುತ್ತಿದ್ದರೆ, ಆ ನೀರಿನಲ್ಲೇ ಆಟವಾಡುತ್ತಾ ಮಕ್ಕಳು ಸಂಭ್ರಮಿಸಿದರು
ಮುಂಬೈನ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲಿ ಕಾರು ಹಾದು ಹೋಗುತ್ತಿದ್ದರೆ, ಆ ನೀರಿನಲ್ಲೇ ಆಟವಾಡುತ್ತಾ ಮಕ್ಕಳು ಸಂಭ್ರಮಿಸಿದರು   

ಮುಂಬೈ: ಮುಂಬೈಗೆ ಶನಿವಾರ ಮುಂಗಾರು ಪ್ರವೇಶಿಸಿದೆ. ನಿರೀಕ್ಷೆಯಂತೆ ಉತ್ತಮ ಮಳೆಯಾಗಿದೆ.

ಅಂಧೇರಿ ಮತ್ತು ಪರೆಲ್‌ ಪ್ರದೇಶಗಳ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ತೊಡಕಾಗಿದೆ. ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲೇ ಜನರು ನಡೆದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಇನ್ನೂ ಕೆಲವೆಡೆ ಸಾರ್ವಜನಿಕರು ರಬ್ಬರ್ ದೋಣಿಗಳನ್ನು ಬಳಸುತ್ತಿ‌ರುವುದು ಕಂಡುಬಂತು. ನಗರದಲ್ಲಿ ಇನ್ನೂ ಐದು ದಿನ ಭಾರಿ ಮಳೆಯಾಗಲಿದೆ. ಭಾರಿ ಬಿರುಗಾಳಿ ಇರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ADVERTISEMENT

ಮಳೆಗೆ ಮುಂಬೈ ತತ್ತರಿಸುವುದು ಏಕೆ?

* ಕೆರೆಗಳ ಅತಿಕ್ರಮಣದಿಂದ ಮಳೆ ನೀರು ಹರಿದು ಹೋಗಲು ಜಾಗದ ಕೊರತೆ

* ತಗ್ಗು ಪ್ರದೇಶಗಳಲ್ಲಿ ತೆಲೆ ಎತ್ತಿರುವ ಬಡಾವಣೆಗಳು

* ಮಳೆಯಾದರೆ ಚರಂಡಿಗಳಿಂದ ರಸ್ತೆಗೆ ನುಗ್ಗುವ ನೀರು

* ಮುನ್ನೆಚ್ಚರಿಕಾ ಕ್ರಮ ಮತ್ತು ಪರಿಹಾರ ಕಾರ್ಯಾಚರಣೆ ವಿಳಂಬ

ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವಿಳಂಬ

**

* 35–40 ಮಿಲಿ ಮೀಟರ್ ಶನಿವಾರ ಮುಂಬೈನಲ್ಲಿ ಸುರಿದ ಮಳೆ ಪ್ರಮಾಣ

* 15 ನಿಮಿಷ ಮಳೆ ಕಾರಣ ಮುಂಬೈ ಉಪನಗರ ರೈಲುಗಳ ಸಂಚಾರದಲ್ಲಿ ಆದ ವಿಳಂಬ

* 5 ದಿನಗಳ ಕಾಲ ಮುಂಬೈನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

* ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವಿಳಂಬ

* ಮುಂಬೈನ ಅಂಧೇರಿ ಮತ್ತು ಪರೆಲ್‌ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡಚಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.