ಮುಂಬೈ (ಪಿಟಿಐ): ಮಹಾನಗರದಲ್ಲಿ ಸೋಮವಾರ ನಿರಂತರವಾಗಿ ಬಿದ್ದ ಭಾರಿ ಮಳೆಯ ಪರಿಣಾಮ ರಸ್ತೆ, ರೈಲು ಹಾಗೂ ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಲಕ್ಷಾಂತರ ಜನರು ತೊಂದರೆ ಅನುಭವಿಸಿದರು.
ಭೋವಿವಾಡ, ಮಾಹೀಮ್ ಹಾಗೂ ಮಾತುಂಗಾದಲ್ಲಿ ರಭಸವಾಗಿ ನೀರು ಹರಿಯುತ್ತಿದ್ದರಿಂದ ಜನರು ಪರದಾಡುವಂತಾಯಿತು ಎಂದು ಮುಂಬೈ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿಗಳಲ್ಲಿ ನೀರು ನಿಂತಿದ್ದರಿಂದ ಮಧ್ಯ ಮುಂಬೈ ಹಾಗೂ ಬಂದರು ಪ್ರದೇಶದಲ್ಲಿ ರೈಲು ಸಂಚಾರ ವಿಳಂಬಗೊಂಡಿತ್ತು. ವಿಮಾನ ಹಾರಾಟ ಕೂಡ ಅರ್ಧಗಂಟೆ ತಡವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.