ಮುಂಬೈ (ಪಿಟಿಐ): ದಕ್ಷಿಣ ಮುಂಬೈಯ ಬಹು ಮಹಡಿ ಕಟ್ಟಡವೊಂದರ 12ನೇ ಮಹಡಿಯಲ್ಲಿ ಶುಕ್ರವಾರ ಸಂಜೆ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದೆ.
ಆಸ್ತಿ–ಪಾಸ್ತಿನಾಶ ನಷ್ಟದ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಕೆಂಪ್ ಕಾರ್ನರ್ ಪ್ರದೇಶದಲ್ಲಿರುವ ಮೌಂಟ್ ಪ್ಲಾಂಟ್ ಎಂಬ 26 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.
14 ಅಗ್ನಿ ಶಾಮಕ ಯಂತ್ರಗಳು, ಏಳು ನೀರಿನ ಟ್ಯಾಂಕರ್‌ಗಳು ಮತ್ತು ನಾಲ್ಕು ಆಂಬುಲೆನ್ಸ್ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.