ADVERTISEMENT

ಮುಂಬೈ ಸರಣಿ ಸ್ಫೋಟದ ಆರೋಪಿ ಬಂಧನ

ಪಿಟಿಐ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST

ಅಹಮದಾಬಾದ್: 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿ ಅಹ್ಮದ್‌ ಶೇಖ್‌ (52) ನನ್ನು ಗುಜರಾತ್‌ನ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಅಹ್ಮದ್‌ ಲಂಬು ಹೆಸರಿನಿಂದ ಕರೆಯುತ್ತಿದ್ದ ಅಹ್ಮದ್‌ ಶೇಖ್‌ನನ್ನು ದಕ್ಷಿಣ ಗುಜಾರಾತ್‌ನ ವಲ್ಸಾದ್‌ ಕರಾವಳಿ ಸಮೀಪ ಎಟಿಎಸ್‌ ತಂಡ ಬಂಧಿಸಿದ್ದು ಆತನನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗುವುದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಫೋಟ ಪ್ರಕರಣದ ನಂತರ ಅಹ್ಮದ್‌ ಶೇಖ್‌ ನಾಪತ್ತೆಯಾಗಿದ್ದ. ಈತನ ಬಂಧನಕ್ಕೆ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿದ್ದ ಪೊಲೀಸ್‌ ಇಲಾಖೆ, ಆರೋಪಿಯ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಿಸಿತ್ತು.

ADVERTISEMENT

ಮುಂಬೈನಲ್ಲಿ ನಡೆದ ಸರಣಿ ಸ್ಫೋಟದಲ್ಲಿ 257 ಜನ ಸಾವನ್ನಪ್ಪಿ, 700 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.