ADVERTISEMENT

ಮುಂಬೈ ಸರಣಿ ಸ್ಫೋಟ: ಆರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ಮುಂಬೈ (ಪಿಟಿಐ): 13/7 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಮಹಾರಾಷ್ಟ್ರದ ಸಂಘಟಿತ ಅಪರಾಧ ತಡೆ ಕಾಯ್ದೆಯ (ಎಂಸಿಒಸಿಎ) ವಿಶೇಷ ಕೋರ್ಟ್‌ಗೆ ನಾಲ್ವರ ವಿರುದ್ಧ ನಾಲ್ಕು ಸಾವಿರ ಪುಟಗಳುಳ್ಳ ಆರೋಪ ಪಟ್ಟಿಯನ್ನು ಸಲ್ಲಿಸಿದೆ.

2011ರಲ್ಲಿ ಮುಂಬೈನ ಜನದಟ್ಟಣೆಯ ವಿವಿಧ ಪ್ರದೇಶಗಳಲ್ಲಿ ಸಂಜೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 27 ಜನ ಮೃತಪಟ್ಟು 130 ಜನ ಗಾಯಗೊಂಡಿದ್ದರು. ನಕ್ವಿ ಅಹ್ಮದ್, ನದೀಮ್ ಶೇಖ್, ಕನ್ವರ್ ಪಾತ್ರಿಜಾ ಹಾಗೂ ಹರೂನ್ ನಾಯ್ಕ ವಿರುದ್ಧ ವಿಚಾರಣೆ ಕೈಗೊಳ್ಳಲಾಗಿದೆ. 

ಸ್ಫೋಟಗಳಿಗೆ ತಾಂತ್ರಿಕ ಸಹಕಾರ ನೀಡಿದ್ದಾರೆ ಎಂದು  ಶಂಕಿಸಲಾದ ಇಂಡಿಯನ್ ಮುಜಾಹಿದಿನ್‌ಗೆ ಸೇರಿದ ವಾಕ್ವಾಸ್, ತಬ್ರೇಜ್ ಹಾಗೂ ಯಾಸಿನ್ ಭಟ್ಕಳ್ ಸೇರಿದಂತೆ ತಲೆಮರೆಸಿಕೊಂಡಿರುವ ಒಟ್ಟು ಐವರು ಆರೋಪಿಗಳ ವಿರುದ್ಧವೂ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.