ADVERTISEMENT

ಮುಟ್ಟಿನ ನೈರ್ಮಲ್ಯ: ಜಿಲ್ಲಾಧಿಕಾರಿಯಿಂದ ಜಾಗೃತಿ

ಪಿಟಿಐ
Published 25 ಫೆಬ್ರುವರಿ 2018, 19:42 IST
Last Updated 25 ಫೆಬ್ರುವರಿ 2018, 19:42 IST

ಜೈಪುರ: ಋತುಸ್ರಾವದ ಬಗ್ಗೆ ಜಾಗೃತಿ ಮೂಡಿಸುವ ಅಕ್ಷಯ್‌ ಕುಮಾರ್ ಅಭಿನಯದ ‘ಪ್ಯಾಡ್‌ಮನ್’ ಸಿನಿಮಾ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ನೈರ್ಮಲ್ಯ, ಮುಟ್ಟಿನ ಆರೋಗ್ಯದ ಬಗ್ಗೆ ಮಾತನಾಡಿರುವ ಈ ಸಿನಿಮಾ ಹಲವು ಅಭಿಯಾನ ಹುಟ್ಟಿಕೊಳ್ಳಲು ಕಾರಣವಾಗಿದೆ.

‘ಚುಪ್ಪಿ ತೋಡ–ಸಯಾನಿ ಬನೊ’ (ಮೌನ ಮುರಿಯಿರಿ; ದೊಡ್ಡವರಂತೆ ಮಾತನಾಡಿ) ಎಂಬ ಹೆಸರಿನಲ್ಲಿ ಜಾಗೃತಿ ಕಾರ್ಯಕ್ರಮಗಳು ರಾಜಸ್ಥಾನದ ಅಲ್ವಾರ್ ಮತ್ತು ನಗೌರ್ ಜಿಲ್ಲೆಯಲ್ಲಿ ಆರಂಭವಾಗಿದೆ.

ಮುಟ್ಟಿನ ನೈರ್ಮಲ್ಯ, ಆರೋಗ್ಯಕರ ಮೂಲಭೂತ ಸೌಕರ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು 2016ರಲ್ಲಿ ನಾಗೌರ್ ಜಿಲ್ಲಾಧಿಕಾರಿಯಾಗಿದ್ದ ರಾಜನ್ ವಿಶಾಲ್ ಆರಂಭಿಸಿದ್ದರು. ಸದ್ಯ ಅಲ್ವಾರ್ ಜಿಲ್ಲಾಧಿಕಾರಿಯಾಗಿರುವ ರಾಜನ್ ಅಲ್ಲೂ ಇದೇ ಮಾದರಿ ಅಭಿಯಾನ ಆರಂಭಿಸಿದ್ದಾರೆ.

ADVERTISEMENT

‘ಮುಟ್ಟಿನ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಯೋಜನೆಯಡಿ ಯುವತಿಯರಿಗೆ ಮಾಹಿತಿ ಪುಸ್ತಕ, ಸಿ.ಡಿ. ಇರುವ ಕಿಟ್‌ ನೀಡಲಾಗುವುದು. ಇದರಲ್ಲಿ ನ್ಯಾಪ್ಕಿನ್‌ಗಳನ್ನು ಬಳಸುವುದು ಮತ್ತು ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಜನ್ ವಿಶಾಲ್ ತಿಳಿಸಿದ್ದಾರೆ.

ಈ ಹಿಂದೆಯೂ ಹಲವು ಸ್ವಸಹಾಯ ಮಹಿಳಾ ಗುಂಪುಗಳು ಮುಟ್ಟಿನ ನೈರ್ಮಲ್ಯದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದವು. ಪ್ಯಾಡ್‌ಮ್ಯಾನ್ ಸಿನಿಮಾ ಹಾಗೂ ಜಿಲ್ಲಾಧಿಕಾರಿ ರಾಜನ್ ಅಭಿಯಾನದಿಂದ ರಾಜಸ್ಥಾನದಲ್ಲಿ ಜನ ಮುಟ್ಟಿನ ಬಗ್ಗೆ ನಿರ್ಭೀತಿಯಿಂದ ಮಾತನಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.