ADVERTISEMENT

ಮುಲಾಯಂ ವಿರುದ್ಧ ತನಿಖೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

ನವದೆಹಲಿ (ಪಿಟಿಐ): ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ಧದ ಅಕ್ರಮ ಆಸ್ತಿ ತನಿಖೆಯನ್ನು ಸಿಬಿಐ ಕೈಬಿಡುವ ಸಾಧ್ಯತೆ ಇದೆ.

ತಂದೆ ಮತ್ತು ಮಗನ ಬಳಿ ಲೆಕ್ಕಕ್ಕೆ ಸಿಗದ ಯಾವ ಅಕ್ರಮ ಆಸ್ತಿಯೂ ಇಲ್ಲ ಮತ್ತು ಆಸ್ತಿ ಗಳಿಕೆಯಲ್ಲಿ ದ್ವಿಗುಣಗೊಂಡಿರುವ ನಿದರ್ಶನ ಇಲ್ಲ ಎಂದು ಸಿಬಿಐ ತನಿಖಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.