ನವದೆಹಲಿ (ಪಿಟಿಐ): ನೌಕಾಯಾನ ಮೂಲಕ ವಿಶ್ವ ಪರ್ಯಟನೆ ಮಾಡಿದ ನೌಕಾಪಡೆ ಅಧಿಕಾರಿ ಅಭಿಲಾಷ್ ಟೋಮಿ ಮತ್ತು ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿ ಸಾಹಸ ಮೆರೆದ ಪಂಜಾಬ್ ರೆಜಿಮೆಂಟ್ನ ಮೇಜರ್ ಮಹೇಶ್ ಕುಮಾರ್ ಸೇರಿದಂತೆ ಮೂವರಿಗೆ ಶುಕ್ರವಾರ ಇಲ್ಲಿ ‘ಕೀರ್ತಿ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉತ್ತರಾಖಂಡ ಪ್ರವಾಹ ಸಂತ್ರಸ್ತರನ್ನು ರಕ್ಷಿಸುತ್ತಿದ್ದಾಗ ಮೃತಪಟ್ಟ ವಾಯುಪಡೆ ಅಧಿಕಾರಿ ಡೆರಿಲ್ ಕ್ಯಾಸ್ಟೆಲಿನೊ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಯಿತು.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು 10 ಮಂದಿಗೆ ‘ಶೌರ್ಯ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಿದರು. ಅಸ್ಸಾಂನಲ್ಲಿ ನಡೆದ ಅಪಘಾತದಲ್ಲಿ ತಮ್ಮ ಮೂವರು ಸಹೋದ್ಯೋಗಿಗಳನ್ನು ಕಾಪಾಡುವಾಗ ಮೃತಪಟ್ಟ ಗಡಿ ರಸ್ತೆ ಸಂಸ್ಥೆಯ ಸಿವಿಲ್ ಎಂಜಿನಿಯರ್ ಮನಿಷ್, ಅಸ್ಸಾಂನ ದಿನ್‌ಜಾನ್ ಗ್ರಾಮದ ಮನೆಯೊಂದರಲ್ಲಿ ಹೊತ್ತಿಕೊಂಡ ಬೆಂಕಿ ಆರಿಸುವಾಗ ಅಸುನೀಗಿದ ವಾಯುಪಡೆ ಯೋಧ ಮುರಳಿ ಕಣ್ಣನ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.