ADVERTISEMENT

ಮೇಘಾಲಯ: ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಗೆದ್ದ ಮುಕುಲ್ ಸಂಗ್ಮಾ

ಏಜೆನ್ಸೀಸ್
Published 3 ಮಾರ್ಚ್ 2018, 9:11 IST
Last Updated 3 ಮಾರ್ಚ್ 2018, 9:11 IST
ಫೆಬ್ರುವರಿ 27ರಂದು ಮತದಾನ ಮಾಡಿದ ಬಳಿಕ ಕುಟುಂದವರ ಜತೆ ಮುಕುಲ್‌ ಸಂಗ್ಮಾ (ಸಂಗ್ರಹ ಚಿತ್ರ)
ಫೆಬ್ರುವರಿ 27ರಂದು ಮತದಾನ ಮಾಡಿದ ಬಳಿಕ ಕುಟುಂದವರ ಜತೆ ಮುಕುಲ್‌ ಸಂಗ್ಮಾ (ಸಂಗ್ರಹ ಚಿತ್ರ)   

ಶಿಲ್ಲಾಂಗ್: ಮೇಘಾಲಯದ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಆಮ್‌ಪಟಿ ಮತ್ತು ಸಾಂಗ್‌ಸಕ್ ಕ್ಷೇತ್ರಗಳಿಂದ ಅವರು ಸ್ಪರ್ಧಿಸಿದ್ದರು.

2010ರಿಂದ ಮೇಘಾಲಯದ ಮುಖ್ಯಮಂತ್ರಿಯಾಗಿರುವ ಸಂಗ್ಮಾ, ಆಮ್‌ಪಟಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಕುಲ್ ಚ್ ಹಜೊಂಗ್ ವಿರುದ್ಧ 6,000 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಸಾಂಗ್‌ಸಕ್‌ನಲ್ಲಿ ಎನ್‌ಪಿಪಿಯ ನಿಹಿಮ್ ಡಿ ಶಿರಾ ವಿರುದ್ಧ ಸುಮಾರು 1,300 ಮತಗಳ ಅಂತರಿಂದ ಜಯಗಳಿಸಿದ್ದಾರೆ.

ಮುಕುಲ್ ಸಂಗ್ಮಾ ಪತ್ನಿ ಡಿಕ್ಕಂಚಿ ಡಿ ಶಿರಾ ಮಹೇಂದ್ರಗಂಜ್ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ಇವರು ಬಿಜೆಪಿಯ ಪ್ರೇಮಾನಂದ ಕೊಚ್ ವಿರುದ್ಧ ಸುಮಾರು 6,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ADVERTISEMENT

ಸದ್ಯ ಮೇಘಾಲಯದಲ್ಲಿ 23 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದ್ದರೆ, ಎನ್‌ಪಿಪಿ 14, ಬಿಜೆಪಿ 6, ಯುಡಿಪಿ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ. ಫೆಬ್ರುವರಿ 27ರಂದು ಮೇಘಾಲಯ ವಿಧಾನಸಭೆಗೆ ಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.