ADVERTISEMENT

ಮೇನಕಾ, ರಜನಿಕಾಂತ್‌ಗೆ ಜಯಾ ಕೃತಜ್ಞತೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಚೆನ್ನೈ (ಐಎಎನ್‌ಎಸ್‌): ತಮಗೆ ನೈತಿಕ ಬೆಂಬಲ ನೀಡಿದ ನಟ ರಜನಿಕಾಂತ್‌ ಮತ್ತು ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರಿಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕೃತಜ್ಞತೆ ಹೇಳಿದ್ದಾರೆ.

‘ಕೇಂದ್ರ ಸಚಿವರಾಗಿ ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ನನ್ನ ಕುರಿತು ಯೋಚಿಸಲು ಸಮಯ ಹೊಂದಿಸಿಕೊಂಡು ಪತ್ರ ಬರೆದಿದ್ದೀರಿ ಇದಕ್ಕೆ ಅಭಾರಿ’ ಎಂದು ಜಯಲಲಿತಾ ಹೇಳಿದ್ದಾರೆ.

ರಜನಿಕಾಂತ್‌ ಅವರಿಗೆ ಜಯಲಲಿತಾ, ‘ನನ್ನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಕ್ಕಾಗಿ ಕೃತ­ಜ್ಞತೆ. ನಿಮಗೆ ದೇವರು ದೀರ್ಘಾಯಸ್ಸು, ಆರೋಗ್ಯ ಮತ್ತು ಎಲ್ಲಾ ಚಟುವಟಿಕೆ­ಗಳಲ್ಲಿಯೂ ಯಶಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.