ಲೂಧಿಯಾನ/ನವದೆಹಲಿ (ಪಿಟಿಐ): ಕಾಂಗ್ರೆಸ್ ಸರ್ಕಾರದ ‘ಭ್ರಷ್ಟಾಚಾರ’ವನ್ನು ‘ಎಬಿಸಿಡಿ’ ವರ್ಣಮಾಲೆ ಅಕ್ಷರ ಬಳಸಿ ಟೀಕಿಸಿದ್ದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರಿಗೆ ಗುರುವಾರ ಕಾಂಗ್ರೆಸ್ ತಿರುಗೇಟು ನೀಡಿದೆ.
ಕೇಂದ್ರ ಮಾಹಿತಿ ಮತ್ತು ವಾರ್ತಾ ಸಚಿವ ಮನೀಷ್ ತಿವಾರಿ ಅವರು ಮೋದಿ ಅವರನ್ನು ‘ಎಫ್’ (ಫೇಕ್ (ನಕಲಿ) ಎನ್ಕೌಂಟರ್) ಮತು್ತ ‘ಜಿ’ (ಜಿನೋಸೈಡ್– ನರಹತೆ್ಯ) ಪದಗಳಿಂದ ಅಣಕಿಸಿದ್ದಾರೆ.
ಇನ್ನೊಬ್ಬ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರು ಎದುರಾಳಿ ಬ್ಯಾಟ್ಸಮನ್ರನ್ನು ಮಣಿಸಲು ‘ಬಾಡಿಲೈನ್’ ಬೋಲಿಂಗ್ ಪ್ರಯೋಗಿಸುತ್ತಿದ್ದ ವಿವಾದಿತ ಇಂಗ್ಲೀಷ್ ಕ್ರಿಕೆಟ್ ತಂಡದ ನಾಯಕ ಡಗ್ಲಾಸ್ ರಾಬರ್ಟ್ ಜಾರ್ಡಿನ್ ಅವರಿಗೆ ಮೋದಿ ಅವರನ್ನು ಹೋಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.