ಪಾಟ್ನಾ (ಪಿಟಿಐ) : `ವೈವಿಧ್ಯತೆಯಿಂದ ಕೂಡಿರುವ ನಮ್ಮ ದೇಶವನ್ನು ಆಳಲು ಒಗ್ಗಟ್ಟು ಮೂಡಿಸುವ ಗುಣವುಳ್ಳ ನಾಯಕನ ಅಗತ್ಯವಿದೆಯೇ ಹೊರತು ವಿಭಜಿಸುವ ಗುಣವುಳ್ಳ ನಾಯಕನಲ್ಲ' ಎನ್ನುವ ಮೂಲಕ ಪ್ರಧಾನಿ ಅಭ್ಯರ್ಥಿಗೆ ನರೇಂದ್ರ ಮೋದಿ ಸೂಕ್ತವಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೋದಿ ವಿರುದ್ಧ ಶುಕ್ರವಾರ ಇಲ್ಲಿ ವಾಗ್ದಾಳಿ ನಡೆಸಿದರು.
ಸುದ್ದಿವಾಹಿನಿಯ ಜತೆ ಮಾತನಾಡುವ ವೇಳೆ 'ದೇಶವನ್ನು ವಿಭಜಿಸುವ ನಾಯಕ ಬೇಡ ಎಂಬುದನ್ನು ಈ ಮೊದಲೇ ನಾವು ಬಿಜೆಪಿಗೆ ಸ್ಪಷ್ಟಪಡಿಸಿದ್ದೇವೆ' ಎಂದು ಅವರು ತಿಳಿಸಿದರು.
'ಬಿಜೆಪಿಯಲ್ಲಿ ಸದ್ಯ ವ್ಯಕ್ತಿ ಆಧಾರಿತ ವಾತಾವರಣ ನಿರ್ಮಾಣಗೊಂಡಿದೆ. ಅದನ್ನು ಕೇಂದ್ರವಾಗಿಟ್ಟುಕೊಂಡೇ ಎಲ್ಲಾ ಚರ್ಚೆಗಳು ನಡೆಯುತ್ತಿವೆ' ಎಂದು ಅವರು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.