ADVERTISEMENT

ಯಾಸೀನ್‌ ಕಸ್ಟಡಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ):  ಇಂಡಿಯನ್‌ ಮುಜಾಹಿದೀನ್‌ ಸಂಘಟನೆಯ ಸಹ ಸ್ಥಾಪಕ ಯಾಸೀನ್‌ ಭಟ್ಕಳ ಮತ್ತು ಆತನ ಸಹಚರ ಅಸಾದುಲ್ಲಾ ಅಖ್ತರ್‌­ನ ಎನ್‌ಐಎ ಕಸ್ಟಡಿಯನು್ನ ಈ ತಿಂಗಳ 17ರ ವರೆಗೆ ವಿಸ್ತರಿಸಲಾಗಿದೆ.

ತೀವ್ರ ಸಂಚು ನಡೆಸಿ ಅನೇಕ ಬಾಂಬ್‌ ಸ್ಫೋಟಗಳನು್ನ ನಡೆಸಿರುವು­ದರಿಂದ ಇನ್ನೂ ಹೆಚ್ಚಿನ ತನಿಖೆ ನಡೆಸ­ಬೇಕಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ಅಧಿಕಾರಿಗಳು ತಿಳಿಸಿದ್ದರಿಂದ ನ್ಯಾಯಾಲಯವು ಕಸ್ಟಡಿ ಅವಧಿ ವಿಸ್ತರಿಸಿದೆ.

ಮೊದಲು ನಿಗದಿಪಡಿಸಿದ್ದ 12 ದಿನಗಳ ಕಸ್ಟಡಿಯ ಅವಧಿ ಮುಗಿ­ದಿದ್ದರಿಂದ ಎನ್‌ಐಎ ಅಧಿಕಾರಿಗಳು ಈ ಇಬ್ಬರು ಭಯೋತ್ಪಾದಕರನು್ನ ಬಿಗಿ ಭದ್ರತೆಯಲಿ್ಲ ಜಿಲ್ಲಾ ನ್ಯಾಯಾಧೀಶ ಐ. ಎಸ್‌. ಮೆಹಾ್ತ ಅವರ ಎದುರು ಹಾಜರುಪಡಿಸಿದರು.

ಅಪರಾಧ ನಡೆದ ಸ್ಥಳಗಳಲಿ್ಲ ಸಂಗ್ರಹಿಸಲಾಗಿರುವ ವಿವಿಧ ವಸ್ತುಗಳ ಜತೆ ಹೋಲಿಕೆ ಮಾಡಲು ಈ ಇಬ್ಬರ ಡಿಎನ್‌ಎ ಮಾದರಿ ಮತ್ತು ಕೈಬರಹದ ಮಾದರಿಯನು್ನ ಪಡೆಯಲು ಅನು­ಮತಿ ನೀಡಬೇಕು ಎಂದು ಎನ್‌ಐಎ ಅಧಿಕಾರಿಗಳು ಮಾಡಿದ ಮನವಿಯನ್ನ ನ್ಯಾಯಾಲಯವು  ಪುರಸ್ಕರಿಸಿದೆ.

ಇ–ಮೇಲ್‌ ಮೂಲಕ ಪಾಕಿಸ್ತಾನದಲಿ್ಲರುವ ಭಯೋತ್ಪಾದಕರಿಂದ ಸಂದೇಶಗಳನು್ನ ಪಡೆಯುತ್ತಿದ್ದ ವಿಚಾರವು ಭಟ್ಕಳ ಮತ್ತು ಅಸಾದುಲ್ಲಾನ ವಿಚಾರಣೆಯಿಂದ ಗೊತ್ತಾಗಿರುವುದರಿಂದ  ಹೆಚ್ಚಿನ ತನಿಖೆ ನಡೆಸಲು ಇಬ್ಬರನು್ನ ಇನ್ನೂ 15 ದಿನಗಳ ಕಾಲ ತಮ್ಮ ವಶಕೆ್ಕ ಕೊಡಬೇಕು ಎಂದು ಎನ್‌ಐಎ ಅಧಿಕಾರಿಗಳು ಮನವಿ ಮಾಡಿದಾಗ ಆಪಾದಿತರ ಪರ ವಕೀಲರು ವಿರೋಧಿಸಿದರು.

ಬೇರೆ ಬೇರೆ ಪ್ರಕರಣಗಳಲಿ್ಲ ತಮ್ಮ ಕಕ್ಷಿದಾರರನು್ನ ಸಿಲುಕಿಸಲು ಎನ್‌ಐಎ ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು.
ಭಟ್ಕಳ ಮತ್ತು ಅಸಾದುಲ್ಲಾ ಸಂಕೇತ ಭಾಷೆಗಳನು್ನ ಮತ್ತು ವಿವಿಧ ಸಂಕೇತಗಳನು್ನ ಬಳಸಿ ಇ–ಮೇಲ್‌ ಕಳುಹಿಸಿದ್ದು, ಸುಮಾರು ಮೂರು ಸಾವಿರ ಪುಟಗಳು ಇವೆ. ಇವುಗಳನು್ನ  ತಿಳಿದುಕೊಳ್ಳಲು ಇಬ್ಬರನು್ನ ಮತ್ತೆ ವಿಚಾರಣೆಗೆ ಒಳಪಡಿಸಬೇಕಾಗಿರುವುದರಿಂದ ಕಸ್ಟಡಿಯ ಅವಧಿ ವಿಸ್ತರಣೆ ಅನಿವಾರ್ಯ ಎಂದು ಎನ್‌ಐಎ ಅಧಿಕಾರಿಗಳು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.