ಶ್ರೀಹರಿಕೋಟಾ (ಐಎಎನ್‌ಎಸ್): ` `ಸುಮಧುರ ಭಾವನೆಗಳು ಮೈಮನವನ್ನು ತುಂಬಿವೆ. ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ~
- ರಾಷ್ಟ್ರದ ಮೊತ್ತಮೊದಲ ಸ್ವದೇಶಿ ನಿರ್ಮಿತ ರಿಸ್ಯಾಟ್-1 ಯಶಸ್ವಿಯಾಗಿ ಕಕ್ಷೆ ಸೇರಿದ ನಂತರ, ಯೋಜನೆಯ ನಿರ್ದೇಶಕಿ 52 ವಯಸ್ಸಿನ ಮಹಿಳಾ ವಿಜ್ಞಾನಿ ಎನ್.ವಳರ್‌ಮತಿ ಅವರು ಆಡಿದ ಮಾತುಗಳಿವು.
ರಿಸ್ಯಾಟ್-1 ಉಪಗ್ರಹ ತಯಾರಿ, ಉಡಾವಣೆ ಮತ್ತು ಕಾರ್ಯನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಳರ್‌ಮತಿ ಅವರದ್ದೇ.
ಮೂಲತಃ ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ವಳರ್‌ಮತಿ ಅವರು ತಮ್ಮ ಆರಂಭಿಕ ಶಿಕ್ಷಣ ಪೂರೈಸಿದ್ದ ಆ ಜಿಲ್ಲೆಯಲ್ಲೇ.
ಇಸ್ರೊದ ಉಪಗ್ರಹ ಯೋಜನೆಯೊಂದರ ನಿರ್ದೇಶಕ ಹೊಣೆ ನಿಭಾಯಿಸಿದ ಎರಡನೇ ಮಹಿಳೆ ಇವರು. ಇದಕ್ಕೆ ಮುನ್ನ ಟಿ.ಕೆ.ಅನುರಾಧಾ ಅವರು ಜಿಸ್ಯಾಟ್-12 ಸಂವಹನ ಉಪಗ್ರಹ ಯೋಜನೆಯ ಮುಖ್ಯಸ್ಥರಾಗಿದ್ದರು.
ವಳರ್‌ಮತಿ ಅವರು ವೃತ್ತಿ ಆರಂಭಿಸಿದ್ದು 1984ರಲ್ಲಿ, ಬೆಂಗಳೂರಿನ ಇಸ್ರೊ ಉಪಗ್ರಹ ಕೇಂದ್ರಕ್ಕೆ ಸೇರುವ ಮೂಲಕ. ಈ ಮುಂಚೆ ಅವರು ಇನ್ಸಾಟ್ 2ಎ, ಐಆರ್‌ಎಸ್ ಐಸಿ, ಐಆರ್‌ಎಸ್ ಐಡಿ, ಟಿಇಎಸ್ ಮತ್ತು ರಿಸ್ಯಾಟ್ ಉಪಗ್ರಹ ಯೋಜನೆಗಳಲ್ಲಿ ಭಾಗಿಯಾಗಿದ್ದರು.
ವಳರ್‌ಮತಿ ಅವರ ಪತಿ ಜಿ.ವಾಸುದೇವನ್ ಬ್ಯಾಂಕ್ ಸೇವೆಯಲ್ಲಿದ್ದಾರೆ. ದಂಪತಿಗೆ ಮಗ, ಮಗಳು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.