ನವದೆಹಲಿ: ಹಿರಿಯ ವಕೀಲ ರಂಜಿತ್ ಸಿನ್ಹಾ ಅವರು ನೂತನ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ.
ಇದೇ ವೇಳೆ ಆರು ಹೆಚ್ಚುವರಿ ಸಾಲಿಸಿಟರ್ ಜನರಲ್ಗಳ ನೇಮಕಕ್ಕೆ ಕೂಡ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹಿರಿಯ ವಕೀಲರಾದ ಮನೀಂದರ್ ಸಿಂಗ್, ಎಲ್.ನಾಗೇಶ್ವರ ರಾವ್, ತುಷಾರ್ ಮೆಹ್ತಾ, ಪಿ.ಎಸ್.ಪಟ್ವಾಲಿಯಾ, ನೀರಜ್ ಕಿಶನ್ ಕೌಲ್ ಹಾಗೂ ಪಿ.ಎಸ್.ನರಸಿಂಹ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆದರೆ, ಅಟಾರ್ನಿ ಜನರಲ್ ನೇಮಕದ ಬಗ್ಗೆ ಈವರೆಗೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.