ADVERTISEMENT

ರತನ್ ಪಾಲ್ ಇನ್ನೈದು ದಿನ ಸಿಬಿಐ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 19:30 IST
Last Updated 5 ಮಾರ್ಚ್ 2011, 19:30 IST

ನವದೆಹಲಿ, (ಪಿಟಿಐ): ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಅಮಾನತುಗೊಂಡ ರಾಷ್ಟ್ರೀಯ ಅಲ್ಯುಮಿನಿಯಂ ಕಂಪೆನಿ ಲಿಮಿಟೆಡ್ (ನಾಲ್ಕೊ) ಸಿಎಂಡಿ ಎ.ಕೆ. ಶ್ರೀವಾಸ್ತವ್ ಅವರ ದಲ್ಲಾಳಿ ರತನ್‌ಪಾಲ್ ಸಿಂಗ್‌ನನ್ನು ಇನ್ನೂ ಐದು ದಿನ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ನ್ಯಾಯಾಧೀಶ ಒ.ಪಿ. ಸೈನಿ, ಪಾಲ್‌ನನ್ನು ಹೆಚ್ಚಿನ ವಿಚಾರಣೆಗೆ ಐದು ದಿನ ಸಿಬಿಐ ವಶಕ್ಕೆ ಒಪ್ಪಿಸಿದರು. ಫೆ. 25 ರಂದು ಶ್ರೀವಾಸ್ತವ್ ಮತ್ತು ನಾಲ್ಕೊ ಸಿಬ್ಬಂದಿ ಬಿ.ಎಲ್. ಬಜಾಜ್ ಎಂಬುವವರನ್ನು ಬಂಧಿಸಿದ್ದ ಸಿಬಿಐ 2.13 ಕೋಟಿ ಮೌಲ್ಯದ10 ಕೆ.ಜಿ. ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.