ADVERTISEMENT

ರಾಂಚಿ ಬಳಿ ಬಿಎಸ್ಎಫ್ ಹೆಲಿಕಾಪ್ಟರ್ ಅಪಘಾತ: ಮೂರು ಸಾವು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 10:15 IST
Last Updated 19 ಅಕ್ಟೋಬರ್ 2011, 10:15 IST

ರಾಂಚಿ (ಜಾರ್ಖಂಡ್) (ಪಿಟಿಐ): ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಕಾರ್ಯ ನಿರತವಾಗಿದ್ದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಹೆಲಿಕಾಪ್ಟರ್ ಒಂದು ರಾಂಚಿಯ ಹೊರ ಹೊರವಲಯದಲ್ಲಿ ನೆಲಕ್ಕಪ್ಪಳಿಸಿದ ಪರಿಣಾಮವಾಗಿ ಅದರಲ್ಲಿ ಇದ್ದ ಇಬ್ಬರು ಪೈಲಟ್ ಗಳು ಮತ್ತು ಒಬ್ಬ ತಂತ್ರಜ್ಞ ಮೃತರಾಗಿದ್ದಾರೆ.

ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (ಎಎಲ್ ಎಚ್) ಧ್ರುವ ರಾಂಚಿಯಿಂದ ಚೈಬಾಸಾ ಕಡೆಗೆ ಹೊರಟಿದ್ದಾಗ ಅದರ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಖುಂಟಿ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತು ಎಂದು ಹಿರಿಯ ಬಿಎಸ್ಎಫ್  ಅಧಿಕಾರಿ ತಿಳಿಸಿದರು.

ಪವನ ಹಂಸ್ ಹೆಲಿಕಾಪ್ಟರ್ ನಲ್ಲಿದ್ದ ಕ್ಯಾಪ್ಟನ್ ಥಾಮಸ್, ಕ್ಯಾಪ್ಟನ್ ಎಸ್.ಪಿ. ಸಿಂಗ್ ಮತ್ತು ತಂತ್ರಜ್ಞ ಮನೋಜ್ ಕುಮಾರ್ ಸ್ವೈನ್ ದುರಂತದಲ್ಲಿ ಮೃತರಾದರು ಎಂದು ಅವರು ಹೇಳಿದರು.

ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ  ನೆಲೆಗೊಳಿಸಲಾಗಿದ್ದ ಸಿಆರ್ ಪಿ ಎಸ್ ಸಿಬ್ಬಂದಿಯ ತಂಡ ಕೂಡಾ ಸ್ಥಳಕ್ಕೆ ಧಾವಿಸಿದೆ. ಕಲೈಕುಂಡ ವೈಮಾನಿಕ ನೆಲೆಯಿಂದ ವಾಯುಪಡೆ ಕೂಡಾ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.