ADVERTISEMENT

ರಾಕ್ಷಸ ಹತನಾದರೂ ವಿರಮಿಸುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST
ರಾಕ್ಷಸ ಹತನಾದರೂ ವಿರಮಿಸುವಂತಿಲ್ಲ
ರಾಕ್ಷಸ ಹತನಾದರೂ ವಿರಮಿಸುವಂತಿಲ್ಲ   

ನವದೆಹಲಿ (ಐಎಎನ್‌ಎಸ್):  ರಾಕ್ಷಸ ಹತನಾಗಿದ್ದಾನೆ. ಆದರೆ ಆತನ ಸಂತತಿ ಇನ್ನೂ ಜೀವಂತವಾಗಿರುವುದರಿಂದ ನಾವು ವಿರಮಿಸುವಂತಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸತ್ಯವ್ರತ ಚತುರ್ವೇದಿ ಹೇಳಿದ್ದಾರೆ.

ಆತನ ಬೆಂಬಲಿಗರು ಯಾವುದೇ ಕ್ಷಣ ಪ್ರತೀಕಾರ ತೆಗೆದುಕೊಳ್ಳಬಹುದು. ನಾಯಕನನ್ನು ಕಳೆದುಕೊಂಡು ಹತಾಶರಾಗಿರುವ ಅವರು  ಭಾರತ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ದಾಳಿ ಎಸಗಿ ತಮ್ಮ ರೋಷಾವೇಶ ಹೊರಹಾಕಬಹುದು ಎಂದು ಎಚ್ಚರಿಸಿದ್ದಾರೆ.

ಪಾಕ್ ಅರಿವಿಗೆ ಬಾರದೆ ಆತ ಇಸ್ಲಾಮಾಬಾದ್‌ಗೆ ಸಮೀಪ ಹಲವು ತಿಂಗಳುಗಳಿಂದ ನೆಲೆ ಪಡೆಯಲು ಸಾಧ್ಯವೇ ಇಲ್ಲ. ಅಲ್ಲಿಂದ ಭಯೋತ್ಪಾದನೆಯನ್ನು ಕಿತ್ತೊಗೆಯಲು ಎಲ್ಲರೂ ಒಮ್ಮನಸ್ಸಿನಿಂದ ಹೋರಾಡಬೇಕು ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.