ADVERTISEMENT

ರಾಜಕೀಯ ವಿರೋಧಿಗಳಿಗೆ ಬಿಜೆಪಿಯಿಂದ ಕಿರುಕುಳ:ಅಖಿಲೇಶ್‌ ಯಾದವ್‌

ಪಿಟಿಐ
Published 1 ಏಪ್ರಿಲ್ 2018, 16:12 IST
Last Updated 1 ಏಪ್ರಿಲ್ 2018, 16:12 IST
ರಾಜಕೀಯ ವಿರೋಧಿಗಳಿಗೆ ಬಿಜೆಪಿಯಿಂದ ಕಿರುಕುಳ:ಅಖಿಲೇಶ್‌ ಯಾದವ್‌
ರಾಜಕೀಯ ವಿರೋಧಿಗಳಿಗೆ ಬಿಜೆಪಿಯಿಂದ ಕಿರುಕುಳ:ಅಖಿಲೇಶ್‌ ಯಾದವ್‌   

ಲಖನೌ: ‘ಉತ್ತರಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು, ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದೆ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.

‘ಪಕ್ಷದ ಆಡಳಿತಾವಧಿಯಲ್ಲಿ ಆರಂಭಿಸಲಾದ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ, ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ವಂಚಿಸುತ್ತಿದೆ’ ಎಂದು ಅವರು ದೂರಿದ್ದಾರೆ.

‘ಗಾಜಿಯಾಬಾದ್‌ನಲ್ಲಿ ಶುಕ್ರವಾರ ಉದ್ಘಾಟನೆಯಾದ ಎತ್ತರಿಸಿದ ಮೇಲ್ಸೇತುವೆಗೆ ಪಕ್ಷ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿಯೇ ಚಾಲನೆ ನೀಡಲಾಗಿತ್ತು’ ಎಂದು ಹೇಳಿದ್ದಾರೆ.

ADVERTISEMENT

ವಂಶಾಡಳಿತ ಕುರಿತು ಯೋಗಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ವಂಶಾಡಳಿತದಿಂದಾಗಿ ರಾಜಕೀಯವಾಗಿ ಉನ್ನತ ಸ್ಥಾನ ಪ್ರವೇಶಿಸಿದ್ದೇನೆ ಎಂಬುದು ನಿಜ. ಅದರ ಜೊತೆಗೆ ರಾಜ್ಯದ ಜನ ನನ್ನ ಸಾಮರ್ಥ್ಯವನ್ನು ಗುರುತಿಸಿದ್ದಾರೆ ಎಂಬುದನ್ನು ಮರೆಯಬಾರದು’ ಎಂದು ತಿರುಗೇಟು ನೀಡಿದರು.

ಮುಂಬರುವ ವಿಧಾನಪರಿಷತ್‌ ಚುನಾವಣೆಗೆ ಎಸ್‌ಪಿ–ಬಿಎಸ್‌ಪಿ ನಡುವೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

ಈ ಸರ್ಕಾರವಂತೂ ಯುವಕರಿಗೆ ಉದ್ಯೋಗ ನೀಡುವುದಿಲ್ಲ. ಹಿಂದೆ ನಮ್ಮ ಸರ್ಕಾರ ಉದ್ಯೋಗ ನೀಡಿರುವುದನ್ನು ಪ್ರಶ್ನಿಸುತ್ತಿದೆ’ ಎಂದು ಅಖಿಲೇಶ್‌ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.