ADVERTISEMENT

ರಾಜೀವ್‌ ಕುಮಾರ್‌ಗೆ ಕಲ್ಕತ್ತಾ ಹೈಕೋರ್ಟ್‌ ರಕ್ಷಣೆ

ಶಾರದಾ ಚಿಟ್‌ ಫಂಡ್‌ ಹಗರಣ; ಜುಲೈ 10ರ ವರೆಗೆ ಬಂಧಿಸದಂತೆ ತಡೆ

ಪಿಟಿಐ
Published 30 ಮೇ 2019, 19:00 IST
Last Updated 30 ಮೇ 2019, 19:00 IST
ರಾಜೀವ್‌ ಕುಮಾರ್‌
ರಾಜೀವ್‌ ಕುಮಾರ್‌   

ಕೋಲ್ಕತ್ತ: ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿಪಶ್ಚಿಮ ಬಂಗಾಳಸಿಐಡಿ ಹೆಚ್ಚುವರಿ ಮಹಾನಿರ್ದೇಶಕ ರಾಜೀವ್‌ ಕುಮಾರ್‌ ಅವರನ್ನು ಜುಲೈ 10ರವರೆಗೆ ಬಂಧಿಸದಂತೆ ಮತ್ತು ಯಾವುದೇ ನಿರ್ಬಂಧ ಹೇರದಂತೆಕಲ್ಕತ್ತಾ ಹೈಕೋರ್ಟ್‌ ಗುರುವಾರ ರಕ್ಷಣೆ ನೀಡಿ ಆದೇಶಿಸಿದೆ.

ರಾಜೀವ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ರಜಾಕಾಲದ ಪೀಠದ ನ್ಯಾಯಮೂರ್ತಿ ಪ್ರತೀಕ್‌ ಪ್ರಕಾಶ್‌ ಬ್ಯಾನರ್ಜಿ, ಜೂನ್‌ 10 ರಿಂದ ಈ ಆದೇಶ ಜಾರಿಗೆ ಬರಲಿದೆ. ಆದೇಶ ಹೊರಬಿದ್ದ 24 ಗಂಟೆಯೊಳಗೆ ಪಾಸ್‌ಪೋರ್ಟ್‌ ಅನ್ನು ಒಪ್ಪಿಸಬೇಕು ಎಂದು ಕುಮಾರ್‌ ಅವರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಜೂ. 12ಕ್ಕೆ ಮುಂದೂಡಿದರು.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಹೊರಡಿಸಿರುವ ನೋಟಿಸ್‌ ರದ್ದು ಪಡಿಸಬೇಕು ಎಂದು ಕೋರಿ ಕುಮಾರ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಬಹುಕೋಟಿ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆಗೆ ಸಹಕರಿಸಬೇಕು ಎಂದೂ ಕುಮಾರ್‌ ಅವರಿಗೆ ಕೋರ್ಟ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.