ADVERTISEMENT

ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಸಿಪಿಐ ಸಂಸದ ರಾಜ ನಾಮಪತ್ರ ಇಂದು

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಚೆನ್ನೈ (ಪಿಟಿಐ): ರಾಜ್ಯಸಭೆಯ ಆರು ಸ್ಥಾನಗಳಿಗೆ ಜೂನ್ 27ರಂದು ನಡೆಯುವ ಚುನಾವಣೆಗೆ ಹಾಲಿ ಸಂಸದ ಡಿ. ರಾಜ ಅವರನ್ನು ಸಿಪಿಐ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಆಡಳಿತ ಪಕ್ಷ ಎಐಎಡಿಎಂಕೆಯ ಬೆಂಬಲದ ನಿರಾಕರಣೆ ನಡುವೆಯೂ  ಸೋಮವಾರ ರಾಜಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ. `ಮುಖ್ಯಮಂತ್ರಿ ಜಯಲಲಿತ ಸಿಪಿಐ ಅಭ್ಯರ್ಥಿ ರಾಜಾ ಅವರಿಗೆ ಬೆಂಬಲ ಸೂಚಿಸಲು ನಿರಾಕರಿಸಿದರು.

ಆದರೂ ಪಕ್ಷದ ಕೇಂದ್ರ ಕಾರ್ಯಕಾರಿಣಿ ರಾಜಾ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ' ಎಂದು ಸಿಪಿಐನ ರಾಷ್ಟ್ರ ಕಾರ್ಯದರ್ಶಿ ಸುಧಾಕರ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT