ADVERTISEMENT

ರಾಜ್ ಅಪಹರಣ: ವಿಚಾರಣೆ ಶುರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST
ರಾಜ್ ಅಪಹರಣ: ವಿಚಾರಣೆ ಶುರು
ರಾಜ್ ಅಪಹರಣ: ವಿಚಾರಣೆ ಶುರು   

ಈರೋಡ್, (ತಮಿಳುನಾಡು), (ಪಿಟಿಐ): ಸುಧೀರ್ಘ ಕಾಲ ನೆನೆಗುದಿಗೆ ಬಿದ್ದಿದ್ದ ದಿವಂಗತ ವರನಟ ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣ ಈರೋಡ್ ಜಿಲ್ಲೆಯ ಗೊಬಿಚೆಟ್ಟಿಪಾಳಯಂನ ತ್ವರಿತಗತಿ ನ್ಯಾಯಾಲಯದಲ್ಲಿ ಗುರುವಾರ ಆರಂಭವಾಯಿತು.

ರಾಜ್‌ಕುಮಾರ್ ಅವರು ತಮ್ಮ ಹುಟ್ಟೂರು ದೊಡ್ಡ ಗಾಜನೂರಿನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ 2000ರ ಜುಲೈ 30ರಂದು ಕಾಡುಗಳ್ಳ ವೀರಪ್ಪನ್ ಮತ್ತು ಆತನ ಸಹಚರರು ಅವರನ್ನು ಅಪಹರಿಸಿದ್ದರು.

ರಾಜ್ ಅವರನ್ನು 108 ದಿನಗಳ ಬಳಿಕ 2000ರ ನವೆಂಬರ್ 15ರಂದು ವೀರಪ್ಪನ್ ಬಿಡುಗಡೆ ಮಾಡಿದ್ದ. ನಾಲ್ಕು ವರ್ಷಗಳ ನಂತರ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ವೀರಪ್ಪನ್ ಹತ್ಯೆಯಾಗಿದ್ದ. ಇತರ ಆರೋಪಿಗಳಾದ ಸೇತುಕುಳಿ ಗೋವಿಂದನ್ ಮತ್ತು ರಂಗಸ್ವಾಮಿ ಈಗಾಗಲೇ ಮೃತಪಟ್ಟಿದ್ದಾರೆ. ವಿಚಾರಣೆ ವೇಳೆ ವೀರಪ್ಪನ್‌ನ 10 ಸಹಚರರು ನ್ಯಾಯಾಲಯಕ್ಕೆ ಹಾಜರಾದರು.

ADVERTISEMENT

ಸಾಕ್ಷಿಗಳ ಪರವಾಗಿ ರಾಜ್‌ಕುಮಾರ್ ಅಳಿಯ ಎಸ್. ಎ. ಗೋವಿಂದರಾಜ್, ಇನ್ನೊಬ್ಬ ಸಂಬಂಧಿಕ ನಾಗೇಶ ಮತ್ತು ಚಲನಚಿತ್ರ ಸಹಾಯಕ ನಿರ್ದೇಶಕ ನಾಗಪ್ಪ ಕೋರ್ಟ್‌ಗೆ ಹಾಜರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.