ಹರಿದ್ವಾರ (ಐಎಎನ್‌ಎಸ್, ಪಿಟಿಐ): ಯೋಗ ಗುರು ಬಾಬಾ ರಾಮದೇವ್ ಅವರ ಸಹಾಯಕ ಬಾಲಕೃಷ್ಣ ಅವರನ್ನು ಶುಕ್ರವಾರ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.ಬಾಲಕೃಷ್ಣ ಅವರು ನಕಲಿ ದಾಖಲೆಗಳನ್ನು ನೀಡಿ ಪಾಸ್‌ಪೋರ್ಟ್ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೋರಡಿಸಿತ್ತು.
ಇಲ್ಲಿನ ಪತಂಜಲಿ ಯೋಗ ಆಶ್ರಮಕ್ಕೆ ಆಗಮಿಸಿದ ಸಿಬಿಐ ಅಧಿಕಾರಿಗಳು ಬಾಲಕೃಷ್ಣ ಅವರನ್ನು ಬಂಧಿಸಿ ಕರೆದೊಯ್ದರು. ಈ ಸಂದರ್ಭದಲ್ಲಿ ಆಶ್ರಮದ ಸುತ್ತಲು ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಾಲಕೃಷ್ಣ ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ಡೆಹ್ರಾಡೂನ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಬೆದರಿಕೆ ತಂತ್ರ: ಬಾಲಕೃಷ್ಣ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಮದೇವ್, ಇದು `ಸರ್ಕಾರದ ಬೆದರಿಕೆ ತಂತ್ರ~ ಎಂದು ಟೀಕಿಸಿದ್ದಾರೆ.ಬಾಲಕೃಷ್ಣ ವಿರುದ್ಧ ಕ್ರಮ ತೆಗೆದು ಕೊಳ್ಳುವುದರ ಮೂಲಕ ಸ್ವದೇಶಕ್ಕೆ ಕಪ್ಪು ಹಣ ತರುವಂತೆ ನಡೆಸುತ್ತಿರುವ ತಮ್ಮ ಹೋರಾಟವನ್ನು ಹತ್ತಿಕಲು ಸರ್ಕಾರ ಮುಂದಾಗಿದೆ ಬಾಬಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.