ADVERTISEMENT

ರಾಮ್‌ದೇವ್‌ ಟ್ರಸ್ಟ್‌ ವಿರುದ್ಧ ಮತ್ತೆ 11 ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 9:56 IST
Last Updated 12 ಡಿಸೆಂಬರ್ 2013, 9:56 IST

ಡೆಹ್ರಾಡೂನ್ (ಪಿಟಿಐ): ಯೋಗಗುರು ಬಾಬಾ ರಾಮ್‌ದೇವ್‌ ಅವರ ಪತಂಜಲಿ ಯೋಗಪೀಠ ಟ್ರಸ್ಟ್‌ ವಿರುದ್ಧ ಮುದ್ರಾಂಕ ಸುಂಕದಿಂದ ನುಣುಚಿಕೊಂಡಿದ್ದು ಸೇರಿದಂತೆ ಉತ್ತರಾಖಂಡ ಸರ್ಕಾರ 11 ಪ್ರಕರಣಗಳನ್ನು ದಾಖಲಿಸಿದೆ.

ಎಲ್ಲಾ 11 ಪ್ರಕರಣಗಳು ಮುಂದ್ರಾಂಕ ಸುಂಕದಿಂದ ನುಣಿಚಿಕೊಂಡಿದ್ದಕ್ಕೆ ಸಂಬಂಧಿಸಿದ್ದಾಗಿದ್ದು, ಎಂಟು ವರ್ಷಗಳಷ್ಟು ಅಥವಾ ಅದಕ್ಕೂ  ಹಳೆಯ ದಿನಾಂಕಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪ್ರಕರಣ ದಾಖಲಿಸಲು ಅನುಮತಿ ನೀಡಿದ ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನಿಧಿ ಪಾಂಡೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹೊಸ ಪ್ರಕರಣಗಳೂ ಸೇರಿದಂತೆ ರಾಮ್‌ದೇವ್‌ ಒಡೆತನದ ಟ್ರಸ್ಟ್‌ ವಿರುದ್ಧ ಉತ್ತರಾಖಂಡದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 96ಕ್ಕೆ ಏರಿಕೆ ಕಂಡಿದೆ. ಅವುಗಳಲ್ಲಿ 81 ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ದಾಖಲಾಗಿರುವ ನಾಲ್ಕು ಪ್ರಕರಣಗಳೂ ಸೇರಿವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಹೆಚ್ಚಿನ ಪ್ರಕರಣಗಳು ಭಾರತೀಯ ಮುದ್ರಾಂಕ ಸುಂಕ ಕಾಯ್ದೆ ಉಲ್ಲಂಘಿಸಿದ ಆರೋಪದಡಿ ದಾಖಲಾಗಿವೆ. ಎರಡು ಡಜನಗಳಷ್ಟು ಪ್ರಕರಣಗಳು ಜಮೀನ್ದಾರಿ ನಿರ್ಮೂಲನೆ ಹಾಗೂ ಭೂ ಸುಧಾರಣೆ ಕಾಯ್ದೆ (ಜೆಡ್‌ಎಎಲ್‌ಆರ್) ಉಲ್ಲಂಘನೆ ಆರೋಪದಡಿ  ದಾಖಲಾಗಿವೆ ಎಂದೂ ನಿಧಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.