ADVERTISEMENT

ರಾಷ್ಟ್ರಪತಿಯಿಂದ ಆಫ್ರಿಕಾ ಪ್ರವಾಸ?

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ನವದೆಹಲಿ(ಐಎಎನ್‌ಎಸ್): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಈ ತಿಂಗಳ ಅಂತ್ಯದಲ್ಲಿ 12 ದಿನಗಳ ಆಫ್ರಿಕಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದ್ದು, ಇದು ಅವರ ಅಧಿಕಾರಾವಧಿಯ ಕೊನೆಯ ಭೇಟಿ ಎನ್ನಲಾಗಿದೆ.
ಈ ತಿಂಗಳ 27 ಅಥವಾ 28ರಿಂದ ಮೇ 8ರವರೆಗೆ ಸೀಶೆಲ್ಸ್, ದಕ್ಷಿಣ ಆಫ್ರಿಕಾ ಮತ್ತಿತರ ಆಫ್ರಿಕಾ ದೇಶಗಳಿಗೆ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜುಲೈ ಅಂತ್ಯಕ್ಕೆ ಅವರ 5 ವರ್ಷಗಳ ಅಧಿಕಾರಾವಧಿ ಪೂರ್ಣವಾಗಲಿದ್ದು, ಈ ಅವಧಿಯಲ್ಲಿ 12 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು,  ನಾಲ್ಕು ಖಂಡಗಳ 22 ದೇಶಗಳಿಗೆ ಭೇಟಿ ನೀಡಿದ್ದಾರೆ.

ರಿಸಾಟ್ ಉಪಗ್ರಹ

ಚೆನ್ನೈ(ಐಎಎನ್‌ಎಸ್):  ಶ್ರೀಹರಿಕೋಟಾದಿಂದ ಈ ತಿಂಗಳ ಅಂತ್ಯದಲ್ಲಿ ಉಡಾವಣೆಗೊಳ್ಳಲಿರುವ ರಿಸಾಟ್-1 ಸರ್ವೇಕ್ಷಣಾ ಉಪಗ್ರಹವನ್ನು ಮೂರು ತಿಂಗಳ ಹಿಂದೆ ಆರಂಭಿಸಿರುವ ನಿಯಂತ್ರಣ ಕೇಂದ್ರವು ನಿಯಂತ್ರಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಉನ್ನತ ಮೂಲಗಳು ತಿಳಿಸಿವೆ.

ಶ್ರೀಹರಿಕೋಟಾದಲ್ಲಿ ಜನವರಿ ತಿಂಗಳಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೊಸ ನಿಯಂತ್ರಣ ಘಟಕ ಉದ್ಘಾಟಿಸಿದ್ದರು.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.