ನವದೆಹಲಿ: ದೇಶದ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ಬೆಳಗ್ಗೆ 10ಗಂಟೆಗೆ ಮತದಾನ ಆರಂಭವಾಗಿದೆ. ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಹಾಗೂ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮೀರಾ ಕುಮಾರ್ ಕಣದಲ್ಲಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಕ್ಷಣ ಕ್ಷಣದ ಸುದ್ದಿ
ಬೆಳಗ್ಗೆ 10.53: ಅಸ್ಸಾಂ ಶಾಸಕರು ಸೇರಿದಂತೆ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಮತದಾನ ಮಾಡಿದ್ದಾರೆ
10.48: ಬಿಜೆಪಿ ಸಂಸದ ಕೇಂದ್ರ ಸಚಿವೆ ಉಮಾ ಭಾರತಿ ಯುಪಿ ವಿಧಾನ್ ಭವನದಲ್ಲಿ ಮತದಾನ ಮಾಡಿದ್ದಾರೆ. ಗೆಲವು ಯಾರು ಸಾಧಿಸುತ್ತಾರೆ ಎಂಬುದು ಸ್ಪಷ್ಟ ಚಿತ್ರಣ ಇದೆ. ಆದರೆ ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ ಎಂಬುದನ್ನು ನೋಡ ಬೇಕಿದೆ- ಉಮಾ ಭಾರತಿ
10.44: ತಮಿಳುನಾಡಿನಲ್ಲಿ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂಕೆ ಸ್ಟಾಲಿನ್ ಮತದಾನ
10.41: ಜೈಲಿನಲ್ಲಿದ್ದ ಛಗನ್ ಭುಜಬಲ್ ಮತ್ತು ರಮೇಶ್ ಕದಂ ಅವರನ್ನು ಮತದಾನ ಮಾಡುವುದಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಗೆ ಕೆರೆದುಕೊಂಡು ಬರಲಾಗಿದೆ.
10.30: ನಮ್ಮ ಪಕ್ಷದ 19 ಮಂದಿ ಶಾಸಕರ ಮತ ಮೀರಾ ಕುಮಾರ್ ಅವರಿಗೆ - ಬಿಎಸ್ಪಿ ಶಾಸಕ ಲಾಲ್ಜಿ ವರ್ಮಾ
ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯವಲ್ಲ. ಪರಿಶಿಷ್ಟ ಜಾತಿಗೆ ಸೇರಿದವರೊಬ್ಬರು ರಾಷ್ಟ್ರಪತಿಯಾಗಬೇಕು, ಇದು ನಮ್ಮ ಪಕ್ಷ ಮತ್ತು ಚಳುವಳಿಗೆ ಸಿಕ್ಕಿದ ಜಯ- ಬಿಎಸ್ಪಿ ಅಧ್ಯಕ್ಷೆ ಮಾಯಾವತಿ
10.20: ಮಧ್ಯ ಪ್ರದೇಶದ ವಿಧಾನ ಸಭೆಯಲ್ಲಿ ಮತದಾನಕ್ಕಾಗಿ ಶಾಸಕರು ಸರತಿ ಸಾಲಿನಲ್ಲಿ ನಿಂತಿರುವುದು
10.15: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತದಾನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.