ADVERTISEMENT

ರಾಹುಲ್‌ಗೆ ದುಃಖ ತಂದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2014, 19:30 IST
Last Updated 19 ಫೆಬ್ರುವರಿ 2014, 19:30 IST

ಅಮೇಠಿ (ಪಿಟಿಐ): ರಾಜೀವ್‌ ಗಾಂಧಿ ಹಂತಕರನ್ನು ತಮಿಳುನಾಡು ಸರ್ಕಾರ ಬಿಡುಗಡೆಗೊಳಿಸಲಿದೆ ಎಂಬುದು ನನಗೆ ನೋವು ಉಂಟು ಮಾಡಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಜೀವ್‌ ಹತ್ಯೆಯಾದಾಗ ರಾಹುಲ್‌ ಅವರಿಗೆ 21 ವರ್ಷ ವಯಸ್ಸಾಗಿತ್ತು. ‘ಜನರ ಹಕ್ಕುಗಳಿಗಾಗಿ ಕೆಲಸ ಮಾಡಿದ ತಂದೆಯ ಹಂತಕರು ಬಿಡುಗಡೆಯಾಗುತ್ತಿ­ರುವುದರಿಂದ ಬೇಸರವಾಗಿದೆ. ಈ ದೇಶದಲ್ಲಿ ಪ್ರಧಾನ ಮಂತ್ರಿಗೇ ನ್ಯಾಯ ದೊರಕುವುದಿಲ್ಲ ಎಂಬುದು ನನ್ನ ಹೃದಯದ ಮಾತು’ ಎಂದು ಜಗದೀಶ್‌ಪುರ ಸಮೀಪದ ಪುರಬ್‌ ಗ್ರಾಮದಲ್ಲಿ ಮಾತನಾಡುತ್ತಾ ರಾಹುಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.