ADVERTISEMENT

ರಾಹುಲ್ ಸಂಪುಟಕ್ಕೆ ಅತ್ಯಗತ್ಯ - ಕೃಷ್ಣ ಉವಾಚ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 6:10 IST
Last Updated 27 ಜೂನ್ 2012, 6:10 IST

ನವದೆಹಲಿ (ಪಿಟಿಐ): ಪ್ರಣವ್ ಮುಖರ್ಜಿ ಅವರ ರಾಜೀನಾಮೆ ಬೆನ್ನಲ್ಲೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ರಾಹುಲ್ ಗಾಂಧಿ ಸಂಪುಟ ಸೇರುವ ಅಗತ್ಯವಿದೆ ಎಂದು ಬುಧವಾರ ಬಲವಾಗಿ ಪ್ರತಿಪಾದಿಸಿದ್ದಾರೆ.

ಪ್ರಣವ್‌ಮುಖರ್ಜಿ ಹಾಗೂ ವೀರಭದ್ರಸಿಂಗ್ ಅವರ ರಾಜೀನಾಮೆ ನಂತರ ಸಂಪುಟ ಪುನಾರಚನೆಯ ಕೂಗು ಎದ್ದಿರುವ ಸಮಯದಲ್ಲಿ ಕೃಷ್ಣಾ ಅವರ ಈ ಹೇಳಿಕೆ ಭಾರಿ ಮಹತ್ವ ಪಡೆದಿದೆ.

ಈಗಾಗಲೇ ಪ್ರಧಾನ ಮಂತ್ರಿ ಮನಮೋಹನಸಿಂಗ್ ಅವರು ರಾಹುಲ್ ಅವರಿಗೆ ಸಂಪುಟ ಸೇರಲು ಆಹ್ವಾನ ನೀಡಿದ್ದಾರೆ ಎಂದು ಹೇಳಿರುವ ಕೃಷ್ಣ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಹುಲ್ ಸಂಪುಟಕ್ಕೆ ಸೇರಿ ಪರಿಹಾರ ಸೂಚಿಸಬೇಕಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.