ADVERTISEMENT

ರೈಲಿನಲ್ಲಿ ದಾಂಧಲೆ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 19:30 IST
Last Updated 20 ಆಗಸ್ಟ್ 2012, 19:30 IST

ಗುವಾಹಟಿ/ನವ ಜಲ್‌ಪೈಗುರಿ (ಪಿಟಿಐ):  ಈಶಾನ್ಯ ಭಾರತದ ಜನರು ಹೋಗುತ್ತಿದ್ದ ಬೆಂಗಳೂರು-ಗುವಾಹಟಿ ರೈಲಿನಲ್ಲಿ ನಡೆದ ದಾಂಧಲೆಯಲ್ಲಿ ಮತ್ತಿಬ್ಬರ ಇಬ್ಬರ ಶವಗಳು ಪತ್ತೆಯಾಗಿವೆ. ಇದರೊಂದಿಗೆ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.

ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದ ಮೂರನೇ ವಿಶೇಷ ರೈಲಿನಲ್ಲಿ ಭಾನುವಾರ ಕೆಲ ದುಷ್ಕರ್ಮಿಗಳು ನುಗ್ಗಿ ದಾಂಧಲೆ ನಡೆಸಿ, ಪ್ರಯಾಣಿಕರನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ್ದರು. ಪ್ರಯಾಣಿಕರ ಬಳಿಯಿದ್ದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

`ಭಾನುವಾರ ಬೆಲಕೊಬಾ ಮತ್ತು ರಾಣಿನಗರ ರೈಲ್ವೆ ನಿಲ್ದಾಣದ ಸಮೀಪ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದವು. ಆನಂತರ ಹೊಸ ಜಲ್‌ಪೈಯ್‌ಗುರಿ ಸಮೀಪದ ಹಲಕಟಾ ಬಳಿ ಮತ್ತಿಬ್ಬರ ಶವ ದೊರೆತಿವೆ ~ಎಂದು ರೈಲ್ವೆ ಇಲಾಖೆ ಮೂಲಗಳು ಸೋಮವಾರ ತಿಳಿಸಿವೆ.

ಒಂಬತ್ತು ಜನ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT